ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಪ್ರಯೋಗಿಸಿ ಟ್ವೀಟ್ ಮಾಡಿದ ದಿಗ್ವಿಜಯ ಸಿಂಗ್
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಆಕ್ಷೇಪಣಕಾರಿ ಮಾತುಗಳಿರುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ

Published On :
ನವದೆಹಲಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಆಕ್ಷೇಪಣಕಾರಿ ಮಾತುಗಳಿರುವ ಪೋಸ್ಟ್ ಒಂದನ್ನು ಸಾಮಾಜಿಕ ಜಾಲತಾನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದಿಗ್ವಿಜಯ ಸಿಂಗ್, ಪ್ರಧಾನಿ ಮೋದಿಯವರ ಬೆಂಬಲಿಗರ ವಿರುದ್ಧ ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಪದವನ್ನು ಬರೆದುಕೊಂಡಿದ್ದಾರೆ.
ದಿಗ್ವಿಜಯ ಅವರು ಪೋಸ್ಟ್ ಮಾಡಿದ ಸಂದೇಶದಲ್ಲಿ ಪ್ರಧಾನಿ ಮೋದಿಯ ಚಿತ್ರವಿದ್ದು ಅದರ ಮುಂದೆ "ನನ್ನ ಸಾಧನೆಗಳು 1) ಭಕ್ತೋಂಕೋ ಚೂ** ಬನಾಯ 2.)ಚೂ*** ಕೊ ಭಕ್ತ್ ಬನಾಯ" ಎಂದು ಬರೆಯಲಾಗಿದೆ.
"ಇದು ನನ್ನದಲ್ಲ ಆದರೆ ಅದನ್ನು ಪೋಸ್ಟ್ ಮಾಡಿದವರಿಗೆ ಸಹಾಯ ಆಗದು, ಸಂಬಂಧಪಟ್ಟ ವ್ಯಕ್ತಿಗೆ ನನ್ನ ಕ್ಷಮೆಯಾಚಿಸುತ್ತೇವೆ, ಅವರು ಮೂರ್ಖನಾಗುವ ಕಲೆಯಲ್ಲಿ ಪಳಗಿದ್ದಾರೆ!" ಎಂದು ಸಿಂಗ್ ಅದಕ್ಕೆ ತಲೆಬರಹ ಸೇರಿಸಿದ್ದಾರೆ. ಈ ಕೋಟ್ ನಲ್ಲಿ ಪ್ರಧಾನಿ ಮೋದಿಯನ್ನು ಅವಹೇಲನ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ದಿಗ್ವಿಜಯ ಸಿಂಗ್ ರಾಜ್ಯಸಭೆ ಸದಸ್ಯ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Modiಪ್ರಧಾನ ಮಂತ್ರಿ ನರೇಂದ್ರ ಮೋದಿDigvijaya SinghDigvijaya Singh tweetPrime Minister Narendra Modiಪ್ರಧಾನಿ ಮೋದಿದಿಗ್ವಿಜಯ ಸಿಂಗ್ದಿಗ್ವಿಜಯ್ ಸಿಂಗ್ ಟ್ವೀಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


