ನಿರ್ಮಲಾ ಸೀತಾರಾಮನ್ ಗೆ ರಕ್ಷಣಾ ಖಾತೆ, ಗೋಯಲ್ ಗೆ ರೇಲ್ವೇ ಖಾತೆ!
ತೀವ್ರ ಕುತೂಹಲ ಕೆರಳಿಸಿದ್ದ ಮೋದಿ ಸಂಪುಟ ಪುನಾರಚನೆ ಪೂರ್ಣಗೊಂಡಿದ್ದು, ಅಚ್ಚರಿ ಬೆಳವಣಿಗೆ ಎಂಬಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಮೋದಿ ಸಂಪುಟ ಪುನಾರಚನೆ ಪೂರ್ಣಗೊಂಡಿದ್ದು, ಅಚ್ಚರಿ ಬೆಳವಣಿಗೆ ಎಂಬಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ವಾಣಿಜ್ಯ ಖಾತೆಯನ್ನು ನಿರ್ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರು, ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಪ್ರಧಾನಿ ಮೋದಿ ಸಂಪುಟದಲ್ಲಿ ಬಡ್ತಿ ಪಡೆದಿರುವ ಅವರು ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ರಕ್ಷಣಾ ಖಾತೆಯ ಜವಾಬ್ದಾರಿ ಹೊತ್ತಿದ್ದಾರೆ. ಆ ಮೂಲಕ ಇಂದಿರಾಗಾಂಧಿ ಬಳಿಕ ರಕ್ಷಣಾ ಖಾತೆಯ ಸಚಿವರಾದ ದೇಶದ 2ನೇ ಮಹಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಭಾರತ-ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ಗಡಿ ವಿವಾದ ಈಗಷ್ಟೇ ಬಗೆಹರಿದಿದ್ದು, ಇತ್ತ ಪಾಕಿಸ್ತಾನದ ಗಡಿ ತಂಟೆ ಮುಂದುವರೆದಿದೆ. ಹೀಗಾಗಿ ಭಾರತಕ್ಕೆ ಸಂಪೂರ್ಣ ಪ್ರಮಾಣದ ರಕ್ಷಣಾ ಸಚಿವರ ಅಗತ್ಯತೆ ಇತ್ತು. ಪರಿಕ್ಕರ್ ಅವರು ರಕ್ಷಣಾ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರಾದರೂ, ಗೋವಾ ಚುನಾವಣೆ ಹಿನ್ನಲೆಯಲ್ಲಿ ಅವರು ತವರಿಗೆ ವಾಪಸಾಗಿದ್ದರು. ಇದೀಗ ಈ ಮಹತ್ವದ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ನೀಡಲಾಗಿದೆ. ಈ ಹಿಂದೆ ವಾಣಿಜ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಬಡ್ತಿ ಪಡೆದಿರುವ ನಿರ್ಮಲಾ ಸೀತಾರಾಮನ್ ರಕ್ಷಣಾ ಖಾತೆಯನ್ನೂ ಸಮರ್ಥವಾಗಿ ನಿಭಾಯಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ದೇಶದ ಮೊದಲ ಸ್ವತಂತ್ರ ರಕ್ಷಣಾ ಸಚಿವೆ
ರಕ್ಷಣಾ ಖಾತೆಗೆ ಆಯ್ಕೆಯಾಗುವ ಮೂಲಕ ರಕ್ಷಣಾ ಖಾತೆ ನಿಭಾಯಿಸುತ್ತಿರುವ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೂ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದು, ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಈ ಹೊಣೆಗಾರಿಕೆಯನ್ನು ನಿಭಾಯಿಸಿದ್ದರಾದರೂ, ಪ್ರಧಾನಿ ಹುದ್ದೆಯೊಂದಿಗೆ 1982ರವರೆಗೂ ಖಾತೆ ನಿರ್ವಹಣೆ ಮಾಡಿದ್ದರು. ಹೀಗಾಗಿ ನಿರ್ಮಲಾ ಸೀತಾರಾಮನಾ ಅವರು ದೇಶದ ಮೊದಲ ಸ್ವತಂತ್ರ ರಕ್ಷಣಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ರಕ್ಷಣಾ ಖಾತೆಗೆ ಆಯ್ಕೆಯಾಗುವ ಮೂಲಕ ರಕ್ಷಣಾ ಖಾತೆ ನಿಭಾಯಿಸುತ್ತಿರುವ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೂ ನಿರ್ಮಲಾ ಸೀತಾರಾಮನ್ ಭಾಜನರಾಗಿದ್ದು, ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಈ ಹೊಣೆಗಾರಿಕೆಯನ್ನು ನಿಭಾಯಿಸಿದ್ದರಾದರೂ, ಪ್ರಧಾನಿ ಹುದ್ದೆಯೊಂದಿಗೆ 1982ರವರೆಗೂ ಖಾತೆ ನಿರ್ವಹಣೆ ಮಾಡಿದ್ದರು. ಹೀಗಾಗಿ ನಿರ್ಮಲಾ ಸೀತಾರಾಮನಾ ಅವರು ದೇಶದ ಮೊದಲ ಸ್ವತಂತ್ರ ರಕ್ಷಣಾ ಸಚಿವೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಅಂತೆಯೇ ರೈಲ್ವೇ ಸಚಿವಾಲಯದ ಜವಾಬ್ದಾರಿಯನ್ನು ಇಂದು ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆನೀಡಲಾಗಿದ್ದು, ಈ ಹಿಂದೆ ರೈಲುಗಳ ಸರಣಿ ಅಪಘಾತದ ಹಿನ್ನಲೆಯಲ್ಲಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಆದರೆ ಪ್ರಭು ಅವರ ರಾಜಿನಾಮೆ ಅಂಗೀಕರಿಸದ ಪ್ರಧಾನಿ ಮೋದಿ ಸುರೇಶ್ ಪ್ರಭು ಅವರ ಖಾತೆ ಬದಲಾವಣೆ ಮಾಡಿದ್ದಾರೆ. ಪ್ರಸ್ತುತ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಖಾತೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಾನು ದೀರ್ಘಕಾಲದವರೆಗೆ ರಕ್ಷಣಾ ಸಚಿವಾಲಯ ನಿರ್ವಹಣೆ ಮಾಡುವುದಿಲ್ಲ ಎಂದೆನಿಸುತ್ತದೆ ಎಂದು ಹೇಳಿದ್ದರು. ಆ ಮೂಲಕ ರಕ್ಷಣಾ ಖಾತೆಗೆ ಮತ್ತೋರ್ವ ಸಚಿವರು ಬರಲಿದ್ದಾರೆ ಎಂದು ಸುಳಿವು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhidefence ministryPiyush Goyalರಕ್ಷಣಾ ಇಲಾಖೆNirmala Sitharamanಪಿಯೂಷ್ ಗೋಯಲ್Modi Cabinet reshuffleಮೋದಿ ಸಂಪುಟ ಪುನಾರಚನೆನಿರ್ಮಲಾ ಸೀತಾರಾಮನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


