ದೇಶ

ಭಾರತದಲ್ಲಿ ಇಸ್ಲಾಂ ಧ್ವಜ ಹಾರಾಟ ತಡೆಯಲು ಮೋದಿಗೂ ಸಾಧ್ಯವಿಲ್ಲ: ಉಗ್ರ ಝಾಕಿರ್ ಮುಸಾ

ಹಿಂದೂಸ್ಥಾನದಲ್ಲಿ ಇಸ್ಲಾಂ ಧ್ವಜ ಸ್ಥಾಪನೆಯಾಗುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಗೂ ಸಾಧ್ಯವಿಲ್ಲ ಎಂದು ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಾಕಿರ್...

ಭಾರತದಲ್ಲಿ ಇಸ್ಲಾಂ ಧ್ವಜ ಹಾರಾಟ ತಡೆಯಲು ಮೋದಿಗೂ ಸಾಧ್ಯವಿಲ್ಲ: ಉಗ್ರ ಝಾಕಿರ್ ಮುಸಾ
ನರೇಂದ್ರ ಮೋದಿ-ಝಾಕಿರ್ ಮುಸಾ
Published On :
ಶ್ರೀನಗರ: ಹಿಂದೂಸ್ಥಾನದಲ್ಲಿ ಇಸ್ಲಾಂ ಧ್ವಜ ಸ್ಥಾಪನೆಯಾಗುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಗೂ ಸಾಧ್ಯವಿಲ್ಲ ಎಂದು ಕಾಶ್ಮೀರದ ಮೋಸ್ಟ್ ವಾಂಟೆಡ್ ಉಗ್ರ ಝಾಕಿರ್ ಮುಸಾ ಸವಾಲು ಹಾಕಿದ್ದಾನೆ. 
ಭಾರತದಲ್ಲಿ ಇಸ್ಲಾಂ ಧರ್ಮ ಸ್ಥಾಪನೆಯಾಗುವುದು ಖಚಿತ. ಹಿಂದೂ ಆಡಳಿತಗಾರರನ್ನು ಸರಪಳಿ ಹಾಕಿ ಧರಧರನೆ ಎಳೆದೊಯ್ಯುವ ಕಾಲ ಬಂದೆ ಬರುತ್ತದೆ. ಇನ್ನು ಗೋ ಪೂಜಕರಾಗಿರುವ ನರೇಂದ್ರ ಮೋದಿ ತನ್ನ ರಾಜಕಾರಣ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಎಷ್ಟೇ ಶಕ್ತಿ ಸಂಪಾದಿಸಿದರೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಝಾಕಿರ್ ಮುಸಾ ಮಾತನಾಡಿರುವ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. 
ಆಡಿಯೋದಲ್ಲಿ ಮುಸಾ ಭಾರತೀಯ ಸೇನಾ ಪಡೆ, ಕಾಶ್ಮೀರದ ಪೊಲೀಸರು, ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜತಾಂತ್ರಿಕ ಕಚೇರಿಗಳು ತಮ್ಮ ಟಾರ್ಗೆಟ್ ಎಂದು ಹೇಳಿದ್ದಾನೆ. ಇನ್ನು ಭಾರತ ಸರ್ಕಾರಕ್ಕೆ ಉಗ್ರ ಮಾಹಿತಿ ನೀಡುತ್ತಿರುವವರು ಹಾಗೂ ಜಿಹಾದಿ ಹೋರಾಟಕ್ಕೆ ಅಡ್ಡಿ ಮಾಡುವವರನ್ನು ಬಿಡುವುದಿಲ್ಲ ಎಂದು ಶಪಥಗೈಯ್ದಿದ್ದಾನೆ. 
ಇದೇ ಆಡಿಯೋದಲ್ಲಿ ಪಾಕಿಸ್ತಾನಕ್ಕೂ ಬೆದರಿಕೆ ಹಾಕಿರುವ ಮುಸಾ, ಅಮೆರಿಕವನ್ನು ಸಂತೋಷ ಪಡಿಸುವ ಸಲುವಾಗಿ ಕಾಶ್ಮೀರಿ ಜಿಹಾದ್ ಹೋರಾಟಗಾರರ ಬೆನ್ನಿಗೆ ಪಾಕಿಸ್ತಾನ ಸರ್ಕಾರ ಚೂಹಿ ಹಾಕಿದೆ. ಹೀಗಾಗಿ ಪಾಕಿಸ್ತಾನವನ್ನು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.