ದೇಶ

ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅಧಿಕಾರ ಸ್ವೀಕಾರ!

ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅಧಿಕಾರ ಸ್ವೀಕಾರ!
ಸಂಗ್ರಹ ಚಿತ್ರ
Published On :
ನವದೆಹಲಿ: ನೌಕಾದಳದ ನೂತನ ವೈಸ್ ಅಡ್ಮಿರಲ್ ಆಗಿ ಅಜಿತ್ ಕುಮಾರ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದಿನ ವೈಸ್ ಅಡ್ಮಿರಲ್ ಆಗಿದ್ದ ಕರಂಬೀರ್ ಸಿಂಗ್ ಅವರು ಪೂರ್ವ ನೌಕಾ ದಳ ಪಡೆಗೆ ಮುಖ್ಯಸ್ಥರಾಗಿ ನೇಮಕರಾದ ಹಿನ್ನಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇದೀಗ ಆ ಸ್ಥಾನಕ್ಕೆ ಅಜಿತ್ ಕುಮಾರ್ ಕುಮಾರ್ ಅವರು  ನೇಮಕವಾಗಿದ್ದು, ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪಳಗಿರುವ ಅಜಿತ್ ಕುಮಾರ್ ಅವರು, ಯುದ್ಧ ನೌಕೆಗಳಲ್ಲಿ ಪ್ರಮುಖ ಹೆದ್ದೆಗಳನ್ನು ನಿಭಾಯಿಸಿದ್ದಾರೆ. ಆರಕ್ಕೂ ಹೆಚ್ಚು ನೌಕೆಗಳಲ್ಲಿ ಕಮಾಂಡಿಂಗ್ ಆಫೀಸರ್ ಸೇವೆ ಸಲ್ಲಿಸಿರುವ ಅಜಿತ್ ಕುಮಾರ್  ಅವರು, ಮಿಸೈಲ್ ತಂತ್ರಜ್ಞಾನದ ಕುಲಿಶ್, ತಲ್ವಾರ್, ಕ್ಷಿಪಣಿ ನಿರೋಧ ನೌಕೆಗಳಾದ ಐಎನ್ ಎಸ್ ಮುಂಬೈ ಮತ್ತು ಐಎನ್ ಎಸ್ ಮೈಸೂರುನಲ್ಲಿಯೂ ಕಮಾಂಡಿಂಗ್ ಆಫೀಸರ್ ಆಗಿದ್ದರು. 1981ರಲ್ಲಿ ನೌಕಾಪಡೆಗೆ ಸೇರಿದ ಅಜಿತ್  ಕುಮಾರ್ ಕ್ಷಿಪಣಿಗಳು ಮತ್ತು ಬಂದೂಕುಗಳ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.