ದೇಶ

ಸೆಕ್ಸ್ ಸಿಡಿ ಹಗರಣ: ಪತ್ರಕರ್ತ ವಿನೋದ್ ಶರ್ಮಾಗೆ ನ.13ರವರೆಗೆ ನ್ಯಾಯಾಂಗ ಬಂಧನ

ಸೆಕ್ಸ್ ಸಿಡಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಕ್ಕೊಳಗಾಗಿರುವ ಹಿರಿಯ ಪತ್ರಕರ್ತ ವಿನೋದ್ ಶರ್ಮಾಗೆ ನ.13ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ...

ಸೆಕ್ಸ್ ಸಿಡಿ ಹಗರಣ: ಪತ್ರಕರ್ತ ವಿನೋದ್ ಶರ್ಮಾಗೆ ನ.13ರವರೆಗೆ ನ್ಯಾಯಾಂಗ ಬಂಧನ
ಪತ್ರಕರ್ತ ವಿನೋದ್ ಶರ್ಮಾ
Published On :
ರಾಯ್ಪುರ: ಸೆಕ್ಸ್ ಸಿಡಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಕ್ಕೊಳಗಾಗಿರುವ ಹಿರಿಯ ಪತ್ರಕರ್ತ ವಿನೋದ್ ಶರ್ಮಾಗೆ ನ.13ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಸೆಕ್ಸ್ ಸಿಡಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ವಿನೋದ್ ಶರ್ಮಾ ಅವರನ್ನು ಇಂದು ಪೊಲೀಸರು ರಾಯ್ಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ವಿಚಾರಣೆ ನಡೆಸಿರುವ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ನವೆಂಬರ್ 13ರವರೆಗೂ ವಿನೋದ್ ಶರ್ಮಾ ಅವರಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ ಎಂದು ತಿಳಿದುಬಂದಿದೆ. 
ಸುಲಿಗೆ ಹಾಗೂ ಬ್ಲ್ಯಾಕ್ ಮೇಲೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ, ಬಿಬಿಸಿ ಹಿಂದಿ ವಿಭಾಗದ ಮಾಜಿ ವರದಿಗಾರ ಮತ್ತು ಛತ್ತೀಸ್'ಗಢ ಕಾಂಗ್ರೆಸ್'ನ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ವಿನೋದ್ ವರ್ಮಾ ಅವರನ್ನು ಕೆಲ ದಿನಗಳ ಹಿಂದಷ್ಟೇ ಬಂಧನಕ್ಕೊಳಪಡಿಸಲಾಗಿತ್ತು. 
ವಿನೋದ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಅವರ ಬಳಿಯಿದ್ದ ಹಲವು ಅಶ್ಲೀಲ ವಿಡಿಯೋಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಛತ್ತೀಸ್ಗಢ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭುಪೇಂದ್ರ ಬಘೇಲ್ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. 
ವಿಚಾರಣೆ ವೇಳೆ ವಿನೋದ್ ವರ್ಮಾ ಅವರು ಛತ್ತೀಸ್ಗಢ ಸಚಿವರು ಭಾಗಿಯಾಗಿರುವ ಸೆಕ್ಸ್ ಸಿಡಿಯೊಂದು ತನ್ನ ಬಳಿಯಿರವುದಾಗಿ ಹೇಳಿಕೊಂಡಿದ್ದರು. ಸಚಿವ ರಾಜೇಶ್ ಮುನ್ನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿಯಿದ್ದು, ಹೀಗಾಗಿ ನನ್ನ ವಿರುದ್ದ ಸರ್ಕಾರ ತಿರುಗಿಬಿದ್ದಿದೆ ಎಂದು ಆರೋಪಿಸಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.