ಮುನ್ಸಿಪಲ್ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ: ಜೈಪುರ ನಗರಾಡಳಿತ ಮಂಡಳಿ ಆದೇಶ
ಪ್ರತಿದಿನ ಬೆಳಿಗ್ಗೆ ಮುಖ್ಯ ಕಾರ್ಯಾಲಯದಲ್ಲಿ ರಾಷ್ಟ್ರಗೀತೆ ಹಾಗೂ ಸಂಜೆ ಸಮಯದಲ್ಲಿ ವಂದೇ ಮಾತರಂ ಹಾಡನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಹಾಡಬೇಕೆಂದು ಜೈಪುರ ನಗರಾಡಳಿತ...

Published On :
ಜೈಪುರ: ಪ್ರತಿದಿನ ಬೆಳಿಗ್ಗೆ ಮುಖ್ಯ ಕಾರ್ಯಾಲಯದಲ್ಲಿ ರಾಷ್ಟ್ರಗೀತೆ ಹಾಗೂ ಸಂಜೆ ಸಮಯದಲ್ಲಿ ವಂದೇ ಮಾತರಂ ಹಾಡನ್ನು ಸಿಬ್ಬಂದಿಗಳು ಕಡ್ಡಾಯವಾಗಿ ಹಾಡಬೇಕೆಂದು ಜೈಪುರ ನಗರಾಡಳಿತ ಮಂಡಳಿ ಮಂಗಳವಾರ ಆದೇಶ ಹೊರಡಿಸಿದೆ.
ಕಾರ್ಯಾಲಯದಲ್ಲಿರುವ ಸಿಬ್ಬಂದಿಗಳು ದೇಶಭಕ್ತಿ ಭಾವನೆಯನ್ನು ಜಾಗೃತಗೊಳಿಸಲು ಈ ಆದೇಶ ಆಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ರಾಷ್ಟ್ರಗೀತೆಗಿಂತ ದೊಡ್ಡದು ಬೇರಾವುದು ಇಲ್ಲ. ರಾಷ್ಟ್ರಗೀತೆಯೊಂದಿಗೆ ದಿನವನ್ನು ಆರಂಭಿಸಿ ವಂದೇ ಮಾತರಂ ಹಾಡಿನೊಂದಿಗೆ ದಿನವನ್ನು ಅಂತ್ಯಗೊಳಿಸುವುದರಿಂದ ಧನಾತ್ಮಕ ಶಕ್ತಿ, ಧನಾತ್ಮಕ ಚಿಂತನೆಗಳು ಹೆಚ್ಚಾಗುತ್ತವೆ. ರಾಷ್ಟ್ರೀಯತೆಯು ಜನರ ಸೇವೆಯ ಅರ್ಥವನ್ನು ಪ್ರೇರೇಪಿಸುತ್ತದೆ. ದೇಶದಲ್ಲಿರುವ ಪ್ರತೀಯೊಂದು ಸರ್ಕಾರಿ ಕಾರ್ಯಾಲಯಗಳು ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ರಾಷ್ಟ್ರೀಯವಾದಿಗಳಾಗಿ ಇಂತಹ ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದಕ್ಕೆ ಸರಿಯಬಾರದು ಎಂದು ಜೈಪುರ ಮೇಯರ್ ಅಶೋಕ್ ಲೊಹ್ಟಿಯವರು ಹೇಳಿದ್ದಾರೆ.
ರಾಷ್ಟ್ರಗೀತೆಯನ್ನು ಬೆಳಿಗ್ಗೆ 9.50 ಹಾಡಲಾಗುವುದು. ವಂದೇ ಮಾತರಂ ಗೀತೆಯನ್ನು ಸಂಜೆ 5.55ಕ್ಕೆ ಹಾಡಲಾಗುವುದು. ಈ ಆದೇಶ ಇಂದಿನಿಂದಲೇ ಜಾರಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಕಾರ್ಯಾಲಯದ ಎಲ್ಲಾ ಸಿಬ್ಬಂದಿಗಳು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕಡೆ ಹಾಜರಿರಬೇಕು ಆದೇಶದಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
national anthemರಾಷ್ಟ್ರಗೀತೆವಂದೇ ಮಾತರಂNational songJaipur Municipal Corporationಜೈಪುರ ಮುನ್ಸಿಪಲ್ ಕಾರ್ಪೊರೇಷನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


