ಕೇರಳದಲ್ಲಿ ಉಕ್ಕಿನ ಸೇತುವೆ ಕುಸಿತ; 1 ಸಾವು, 50 ಮಂದಿಗೆ ಗಾಯ
ಕೇರಳದ ಕೊಲ್ಲಂನಲ್ಲಿ ಉಕ್ಕಿನ ಸೇತುವೆ ಕುಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

Published On :
ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ಉಕ್ಕಿನ ಸೇತುವೆ ಕುಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಕೇರಳದ ಕೊಲ್ಲಂನ ಚವರಾದಲ್ಲಿರುವ ಕೇರಳ ಮಿನರಲ್ಸ್ ಮತ್ತು ಮೆಟಲ್ಸ್ ಲಿಮಿಟೆಡ್ ಸಂಸ್ಥೆಯ ಅವರಣದಲ್ಲಿನ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಕೆಎಂಎಂಎಲ್ ನ ಓರ್ವ ಮಹಿಳಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಶ್ಯಾಮಲಾ ಎಂದು ಗುರುತಿಸಲಾಗಿದ್ದು, ಕಾಲುವೆ ಮೇಲೆ ಕೆಎಂಎಂಎಲ್ ಸಂಪರ್ಕಕ್ಕಾಗಿ ನಿರ್ಮಿಸಿದ್ದ ಉಕ್ಕಿನ ಮೇಲು ಸೇತುವೆ ಮೇಲೆ ನಡೆದು ಹೋಗುತ್ತಿದ್ದಾಗ ಸೇತುವೆಯ ಕಬ್ಬಿಣದ ಸರಳುಗಳು ಸಡಿಲಗೊಂಡು ಸೇತುವೆ ಕುಸಿದಿದೆ.
ಘಟನಾ ಸಂದರ್ಭದಲ್ಲಿ ಸೇತುವೆ ಮೇಲೆ ಸುಮಾರು 50ಕ್ಕೂ ಅಧಿಕ ಮಂದಿ ಕೆಎಂಎಂಎಲ್ ನ ನೌಕರರು ಸೇತುವೆ ಮೇಲಿದ್ದರು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


