ದೇಶ

ಮಾಧ್ಯಮಗಳ ಒತ್ತಡದಿಂದ ರಾಜಕೀಯ ಪಕ್ಷ ಕುರಿತು ಘೋಷಣೆ ಮಾಡುವುದಿಲ್ಲ: ಕಮಲ್ ಹಾಸನ್

ಮಾಧ್ಯಮಗಳ ಒತ್ತಡಗಳಿಂದ ಹೊಸ ರಾಜಕೀಯ ಪಕ್ಷ ಕುರಿತ ಘೋಷಣೆಗಳನ್ನು ಮಾಡುವುದಿಲ್ಲ ಎಂದು ನಟ ಕಮಲ್ ಹಾಸನ್ ಅವರು ಗುರುವಾರ ಹೇಳಿದ್ದಾರೆ...

ಮಾಧ್ಯಮಗಳ ಒತ್ತಡದಿಂದ ರಾಜಕೀಯ ಪಕ್ಷ ಕುರಿತು ಘೋಷಣೆ ಮಾಡುವುದಿಲ್ಲ: ಕಮಲ್ ಹಾಸನ್
ನಟ ಕಮಲ್ ಹಾಸನ್
Published On :

ಚೆನ್ನೈ: ಮಾಧ್ಯಮಗಳ ಒತ್ತಡಗಳಿಂದ ಹೊಸ ರಾಜಕೀಯ ಪಕ್ಷ ಕುರಿತ ಘೋಷಣೆಗಳನ್ನು ಮಾಡುವುದಿಲ್ಲ ಎಂದು ನಟ ಕಮಲ್ ಹಾಸನ್ ಅವರು ಗುರುವಾರ ಹೇಳಿದ್ದಾರೆ. 


ರಾಜಕೀಯ ಪಕ್ಷ ಘೋಷಣೆ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರು, ಹುಟ್ಟುಹಬ್ಬದ ದಿನದಂದು ಪಕ್ಷ ಕುರಿತ ಕೆಲ ಪ್ರಮುಖ ವಿಚಾರಗಳನ್ನು ಬಹಿರಂಗಪಡಿಸಲಾಗುವುದು ಎಂದು ಹೇಳಿದ್ದರು. ಈ ಹೇಳಿಕೆ ಹಿನ್ನಲೆಯಲ್ಲಿ ತಮ್ಮ ಹುಟ್ಟುಹಬ್ಬದ ದಿನದಂದೇ ನಟ ಕಮಲ್ ಹಾಸನ್ ಅವರು ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಲಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಸಾರ್ವಜನಿಕ ಘೋಷಣೆಗಳು, ಜನರ ನ್ಯಾಯಾಲಯದಲ್ಲಿಯೇ ಘೋಷಣೆ ಮಾಡಲಾಗುತ್ತದೆ. ಮಾಧ್ಯಮಗಳ ಒತ್ತಡಗಳಿಂದ ರಾಜಕೀಯ ಪಕ್ಷ ಕುರಿತ ಘೋಷಣೆಗಳನ್ನು ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.