ದೇಶ

ಕೋಲ್ಕತಾ: ಕಾರು ಅಪಘಾತದಲ್ಲಿ ಮಯನ್ಮಾರ್ ರಾಯಭಾರಿ ಸಾವು

ಜಾರ್ಖಂಡ್ ನ ಗಿರಿದಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಕಾರು ಅಪಘಾತದಲ್ಲಿ ಕೋಲ್ಕತಾದಲ್ಲಿ ಮಯನ್ಮಾರ್ ರಾಯಭಾರಿಯಾಗಿದ್ದ....

ಕೋಲ್ಕತಾ: ಕಾರು ಅಪಘಾತದಲ್ಲಿ ಮಯನ್ಮಾರ್ ರಾಯಭಾರಿ ಸಾವು
ಅಪಘಾತಕ್ಕೀಡಾದ ಕಾರು
Published On :
ಗಿರಿದಿ: ಜಾರ್ಖಂಡ್ ನ ಗಿರಿದಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಕಾರು ಅಪಘಾತದಲ್ಲಿ ಕೋಲ್ಕತಾದಲ್ಲಿ ಮಯನ್ಮಾರ್ ರಾಯಭಾರಿಯಾಗಿದ್ದ ಪೈ ಸೋ ಅವರು ಮೃತಪಟ್ಟಿದ್ದು, ಅವರ ಪತ್ನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಖಿಲೇಶ್ ಬೆರಿಯಾರ್ ಅವರು ತಿಳಿಸಿದ್ದಾರೆ.
49 ವರ್ಷದ ಸೋ ಅವರು ಪತ್ನಿ ಸಮೇತ ಬಿಹಾರದ ಗಯಾದಿಂದ ಕೋಲ್ಕತಾಗೆ ಮರಳುತ್ತಿದ್ದ ವೇಳೆ ಗಿರಿದಿಯಿಂದ 61 ಕಿ.ಮೀ.ದೂರದಲ್ಲಿರುವ ಗಲಗಿ ಸಮೀಪದ ಜಿಟಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಬೆರಿಯಾರ್ ಅವರು ಹೇಳಿದ್ದಾರೆ.
ಅಪಘಾತದಲ್ಲಿ ಸೋ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡ ಸೋ ಪತ್ನಿ ನಯೋ ಸೇರಿದಂತೆ ಇತರೆ ಮೂವರನ್ನು ದುಮ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಕಾಮೇಶ್ವರ್ ಪ್ರಸಾದ್ ಅವರು ಹೇಳಿದ್ದಾರೆ.
ಮಯನ್ಮಾರ್ ರಾಯಭಾರಿ ಅಕಾಲಿಕ ನಿಧನಕ್ಕೆ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.