ದೇಶ

ಸಚಿವರ ಸೆಕ್ಸ್ ಸಿಡಿ ನನ್ನ ಬಳಿಯಿದೆ, ಹೀಗಾಗಿ ನನ್ನ ಬಂಧಿಸಲಾಗಿದೆ: ವಿನೋದ್ ವರ್ಮಾ

ನನ್ನ ಬಳಿ ಸಚಿವರೊಬ್ಬರ ಲೈಂಗಿಕ ವಿಡಿಯೋವುಳ್ಳ ಸಿಡಿಯಿದೆ, ಹೀಗಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಂಧನಕ್ಕೊಳಗಾಗಿರುವ ...

ಸಚಿವರ ಸೆಕ್ಸ್ ಸಿಡಿ ನನ್ನ ಬಳಿಯಿದೆ, ಹೀಗಾಗಿ ನನ್ನ ಬಂಧಿಸಲಾಗಿದೆ: ವಿನೋದ್ ವರ್ಮಾ
ವಿನೋದ್ ವರ್ಮಾ
Published On :
ಘಾಜಿಯಾಬಾದ್: ನನ್ನ ಬಳಿ ಸಚಿವರೊಬ್ಬರ ಲೈಂಗಿಕ ವಿಡಿಯೋವುಳ್ಳ ಸಿಡಿಯಿದೆ, ಹೀಗಾಗಿ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಬಂಧನಕ್ಕೊಳಗಾಗಿರುವ ಹಿರಿಯ ಪತ್ರಕರ್ತ ವಿನೋದ್ ವರ್ಮಾ ಆರೋಪಿಸಿದ್ದಾರೆ.
ಛತ್ತೀಸಘಡದ ಸಚಿವ ರಾಜೇಶ್ ಮುನ್ನಾತ್ ಅವರ ಲೈಂಗಿಕ ಸಿಡಿ ನನ್ನ ಬಳಿಯಿದೆ. ಈ ಕಾರಣಕ್ಕಾಗಿಯೇ ಸರ್ಕಾರ ನನ್ನ ವಿರುದ್ಧ ತಿರುಗಿಬಿದ್ದಿದೆ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ.
ಸಚಿವರೊಬ್ಬರು ಭಾಗಿಯಾಗಿದ್ದಾರೆನ್ನಲಾದ ಲೈಂಗಿಕ ಕ್ರಿಯೆಯ ವಿಡಿಯೊ ಸಿಡಿ ಇಟ್ಟುಕೊಂಡಿದ್ದ ವಿನೋದ್‌ ವರ್ಮಾ ಹಣಕ್ಕಾಗಿ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಘಾಜಿಯಾಬಾದ್ ನಲ್ಲಿ ಇಂದಿರಾಪುರಂನಲ್ಲಿರುವ ಅವರ ನಿವಾಸದಿಂದ ಬಿಬಿಸಿಯ ಮಾಜಿ ಸಂಪಾದಕ ಮತ್ತು ಅಮರ ಉಜಾಲಾ ಡಿಜಿಟಲ್ ಸಂಪಾದಕ ವಿನೋದ್ ವರ್ಮಾರನ್ನು ಶುಕ್ರವಾರ ಬಂಧಿಸಲಾಗಿದೆ. ಉತ್ತರ ಪ್ರದೇಶ ಮತ್ತು ಛತ್ತೀಸ್ ಗಡ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿವಿನೋದ್ ವರ್ಮಾ ಅವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಬಂಧನದ ವೇಳೆ ವಿನೋದ ವರ್ಮಾ ಬಳಿಯಿಂದ 500 ಸಿಡಿ, ಹಣ, ಮತ್ತು ಲ್ಯಾಪ್ ಟಾಪ್ ಹಾಗೂ ಪೆನ್ ಡ್ರೈವ್ ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ವಿನೋದ್ ವರ್ಮಾರ ಬಿಬಿಸಿಯ ಮಾಜಿ ಸಂಪಾದಕ ಮತ್ತು ಅಮರ ಉಜಾಲಾ ಡಿಜಿಟಲ್ ಸಂಪಾದಕರಾಗಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.