ಅಮೆರಿಕಾಗಿಂತ ಮಧ್ಯಪ್ರದೇಶ ರಸ್ತೆಗಳು ಚೆನ್ನಾಗಿವೆ: ಸಿಎಂ ಹೇಳಿಕೆ ವಿರುದ್ಧ ಟ್ವಿಟ್ಟರಾರತಿ
ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶದ ರಸ್ತೆಗಳೇ ಉತ್ತಮವಾಗಿವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ತೀವ್ರ ...

Published On :
ನವದೆಹಲಿ: ಅಮೆರಿಕದ ರಸ್ತೆಗಳಿಗಿಂತ ಮಧ್ಯಪ್ರದೇಶದ ರಸ್ತೆಗಳೇ ಉತ್ತಮವಾಗಿವೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರು ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸದ್ಯ ವಾಷಿಂಗ್ಟನ್ ನಲ್ಲಿದ್ದಾರೆ, ವಾಷಿಂಗ್ಟನ್ ಡಿಸಿಯ ರಸ್ತೆಗಳು ನನಗೆ ತುಂಬಾ ಹಿಡಿಸಿಲ್ಲ, ಇಲ್ಲಿನ ರಸ್ತೆಗಳಿಗೆ ಹೋಲಿಸಿದರೆ ಮಧ್ಯಪ್ರದೇಶದ ರಸ್ತೆಗಳೇ ವಾಸಿ ಎಂದೆನಿಸಿದೆ ಎಂದು ಯುಎಸ್ – ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟನರ್ಶಿಪ್ ಫೋರಂನಲ್ಲಿ ಹೇಳಿದ್ದಾರೆ.
ವಾಷಿಂಗ್ಟನ್‌ನ ಏರ್ಪೋರ್ಟ್‌ನಿಂದ ಹೊರಟು ಅಮೆರಿಕದ ರಸ್ತೆಗಳಲ್ಲಿ ಪ್ರಯಾಣಿಸಿದ ನಂತರ ನನಗೆ ಇಲ್ಲಿನ ರಸ್ತೆಗಳ ಬಗ್ಗೆ ಸಮಾಧಾನವಿಲ್ಲ ಎಂದು ಹೇಳಿದ್ದಾರೆಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇನ್ನೂ ಚೌಹಾಣ್ ಹೇಳಿಕೆ ಟ್ವಿಟ್ಟರ್ ನಲ್ಲಿ ತೀವ್ರ ಚರ್ಚೆಗೊಳಗಾಗಿದೆ. ಸಿಎಂ ಹೇಳಿಕೆಗೆ ನೆಟ್ಟಿಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


