ದೇಶ

ನ.08 ರಂದು ಬಿಜೆಪಿಯಿಂದ ಕಪ್ಪುಹಣ ವಿರೋಧಿ ದಿನಾಚರಣೆ

ನ.08 500, 1000 ರೂ ನೋಟುಗಳು ನಿಷೇಧಗೊಂಡು ಒಂದು ವರ್ಷವಾಗಲಿದ್ದು, ಬಿಜೆಪಿ ನ.8 ನ್ನು ಕಪ್ಪುಹಣ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ.

ನ.08 ರಂದು ಬಿಜೆಪಿಯಿಂದ ಕಪ್ಪುಹಣ ವಿರೋಧಿ ದಿನಾಚರಣೆ
ಅರುಣ್ ಜೇಟ್ಲಿ
Published On :
ನವದೆಹಲಿ: ನ.08 500, 1000 ರೂ ನೋಟುಗಳು ನಿಷೇಧಗೊಂಡು ಒಂದು ವರ್ಷವಾಗಲಿದ್ದು, ಬಿಜೆಪಿ ನ.8 ನ್ನು ಕಪ್ಪುಹಣ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ. 
ನೋಟು ನಿಷೇಧವನ್ನು ವಿರೋಧಿಸಿ ವಿಪಕ್ಷಗಳು ನ.8 ರಂದು ಕರಾಳ ದಿನ ಆಚರಿಸುತ್ತಿದ್ದು, ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನ.8 ರಂದು ಕಪ್ಪುಹಣ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿದೆ. ದೇಶದಲ್ಲಿ ಪರ್ಯಾಯ ಕಪ್ಪುಹಣವಿತ್ತು, ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ ನಿರ್ಮೂಲನೆಗೆ ಕ್ರಮ ಕೈಗೊಂಡರು, ಆದ್ದರಿಂದ ನ.8 ರಂದು ಬಿಜೆಪಿ ಕಪ್ಪುಹಣ ವಿರೋಧಿ ದಿನವನ್ನು ಆಚರಣೆ ಮಾಡಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಕಪ್ಪುಹಣ ವಿರೋಧಿ ದಿನಾಚರಣೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಗೆ ಕಪ್ಪುಹಣ ನಿಯಂತ್ರಿಸಲು ಹಾಗೂ ಹೊರತೆಗೆಯಲು ಸಾಕಷ್ಟು ಅವಕಾಶ ಇತ್ತು, ಆದರೆ ಮಾಡಲಿಲ್ಲ. ಕಪ್ಪುಹಣ ಹೊರಗೆಳೆಯುವುದಕ್ಕಾಗಿ ಈಗ ಎನ್ ಡಿಎ ಸರ್ಕಾರ ಕೈಗೊಂಡಿರುವ ಕ್ರಮಗಳೂ ಕಡಿಮೆಯದ್ದಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.