ಗುಜರಾತ್ ರಾಜಕೀಯ: ಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿ ಬಿಜೆಪಿಗೆ ಗುಡ್ ಬೈ
ಮುಂಬರುವ ವಿಧಾನಸಭೆ ಚುನಾವಣೆಗೆ ಗುಜರಾತ್ ರಾಜ್ಯ ಸರ್ಕಾರ ಸಜ್ಜಾಗಿರುವ ಬೆನ್ನಲ್ಲೇ , ಮತ್ತೋರ್ವ ಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿ ಭಾರತೀಯ ಜನತಾ ಪಕ್ಷದ (ಬಿಜೆಪಿ)...

Published On :
ಅಹಮದಾಬಾದ್: ಮುಂಬರುವ ವಿಧಾನಸಭೆ ಚುನಾವಣೆಗೆ ಗುಜರಾತ್ ರಾಜ್ಯ ಸರ್ಕಾರ ಸಜ್ಜಾಗಿರುವ ಬೆನ್ನಲ್ಲೇ , ಮತ್ತೋರ್ವ ಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನೀಡಿದ ಯಾವ ಭರವಸೆಯನ್ನೂ ಪೂರೈಸದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಪಟೇಲ್ ಸಮುದಾಯದ ಇನ್ನೋರ್ವ ನಾಯಕ ನರೇಂದ್ರ ಪಟೇಲ್ ಗೆ ಬಿಜೆಪಿ ಸೇರಲು 1 ಕೊಟಿ ರೂ. ಆಮಿಷ ಒಡ್ಡಲಾಗಿತ್ತು ಎನ್ನುವುದು ಕುರಿತು ಅಸಮಾಧಾನ ವ್ಯಕ್ತಪಡಿಸಿದರು. "ನಾನು ಪಟೇಲ್ ಸಮುದಾಯದ ಸುಧಾರಣೆಗೆ ಬಿಜೆಪಿ ನೀಡಿದ್ದ ಪೊಳ್ಳುಭರವಸೆಗಳಿಂದ ನೊಂದು ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಸಮುದಾಯದ ಸುಧಾರಣೆಗಾಗಿಯೇ ನಾನು ಬಿಜೆಪಿಗೆ ಸೇರಿದ್ದೆ. ಆದರೆ ಅವರು ನಮಗೆ ನೀಡಿದ್ದ ನಾಲ್ಕು ಭರವಸೆಗಳನ್ನೂ ಈಡೇರಿಸಲಿಲ್ಲ. ಅವರು ಚುನಾವಣೆ ಸಮಯದಲ್ಲಿ ತಮ್ಮ ಬೆಂಬಲ ಗಳಿಸಲಿಕ್ಕಾಗಿಯೇ ಈ ಭರವಸೆ ನೀಡಿದ್ದರೆಂದು ನಾನು ನಂಬುತ್ತೇನೆ."
"ಬಿಜೆಪಿಯ ವರುಣ್ ಪಟೇಲ್ ಅವರಿಂದ ನೀಡಿರುವ ಲಂಚವನ್ನು ನಿರಾಕರಿಸಿದ್ದಕ್ಕಾಗಿ ನರೇಂದ್ರ ಪಟೇಲ್ ಅವರನ್ನು ನಾನು ಅಭಿನಂದಿಸುತ್ತೇನೆ. ಅವರು ಮದ್ಯಮ ವರ್ಗದ ಕುಟುಂಬದಿಂದ ಬಂದರೂ ಅವರು ಹಣ ಪಡೆಯಲು ನಿರಾಕರಿಸಿದ್ದಾರೆ. ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ನಾನು ಯಾವುದೇ ಹಣವನ್ನು ನಿರೀಕ್ಷಿಸಿರಲಿಲ್ಲ,"
ನೀವು ಕಾಂಗ್ರೆಸ್ ಗೆ ಬೆಂಬಲ ನೀಡುವಿರಾ ಎಂದು ಕೇಳಿದಾಗ ನಮ್ಮ ಸಮುದಾಯದ ಅಭಿವೃದ್ಧಿಯಷ್ಟೇ ನನಗೆ ಮುಖ್ಯ ಎಂದು ಸವಾನಿ ಪುನರುಚ್ಚರಿಸಿದರು.
"ನಾನು ಮತ್ತು ಹಾರ್ಡಿಕ್ ಪಟೇಲ್, ರಾಹುಲ್ ಗಾಂಧಿ ಸಮಯ ನಿಡಿದರೆ ಅವರ ಮುಂದೆ ನಮ್ಮ ದೃಷ್ಟಿಕೋನದ ಕುರಿತು ಹಂಚಿಕೊಳ್ಳಲಿದ್ದೇವೆ. ಎಲ್ಲಕ್ಕೂ ಅಂತಿಮವಾಗಿ ಪಟೇಲ್ ಸಮುದಾಯವನ್ನು ಅಧಿಕಾರಕ್ಕೆ ತಲು ನಾವು ಬಯಸುತ್ತೇವೆ.ಬಿಜೆಪಿ ಬಹಳಷ್ಟು ಭರವಸೆ ನೀಡಿತ್ತು, ಆದರೆ ಏನನ್ನೂ ಕಾರ್ಯಗತಗೊಳಿಸಲಿಲ್ಲ. ನಾನು ರಾಜೀನಾಮೆ ನಿಡಿದ್ದರಿಂದ ಕಾಂಗ್ರೆಸ್ ಗೆ ಏನೂ ಲಾಭವಾಗುವುದಾಗಿ ಭಾವಿಸಬೇಕಿಲ್ಲ" ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿGujaratಗುಜರಾತ್Hardik PatelNikhil SawaniPatidar leader Nikhil SawaniNarendra Patelನಿಖಿಲ್ ಸಾವಾನಿಪಟೇಲ್ ಸಮುದಾಯದ ನಾಯಕ ನಿಖಿಲ್ ಸವಾನಿನರೇಂದ್ರ ಪಟೇಲ್ಹಾರ್ಡಿಕ್ ಪಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


