ತಾಜ್ ಮಹಲ್ ವಿವಾದ ಬಿಜೆಪಿಯ ಅಸಹಿಷ್ಣುತೆಯ ತೋರಿಸುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್
ತಾಜ್ ಮಹಲ್ ಕುರಿತ ಇತ್ತೀಚೆಗಿನ ವಿವಾದಗಳು ಬಿಡೆಪಿ ಪಕ್ಷದ ಅಸಹಿಷ್ಣುತೆಯನ್ನು ತೋರಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

Published On :
ತಿರುವನಂತಪುರಂ: ತಾಜ್ ಮಹಲ್ ಕುರಿತ ಇತ್ತೀಚೆಗಿನ ವಿವಾದಗಳು ಬಿಡೆಪಿ ಪಕ್ಷದ ಅಸಹಿಷ್ಣುತೆಯನ್ನು ತೋರಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ತಿರುವನಂತಪುರಂನಲ್ಲಿ ಸಿಪಿಐಎಂ ನೇತೃತ್ವದ ಎಡ ಪಕ್ಷಗಳು ಆಯೋಜಿಸಿದ್ದ ಜನ ಜಾಗರಣ್ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಪಿಣರಾಯಿ ವಿಜಯನ್ ಅವರು, ಉತ್ತರ ಪ್ರದೇಶ ಪ್ರವಾಸಿ ತಾಣಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟ ಬಳಿಕವೇ ವಿವಾದ ಸೃಷ್ಟಿಯಾಗಿದೆ. ತಾಜ್ ಮಹಲ್ ಅನ್ನು ಶಹಜಾಹನ್ ಎಂಬ ಮುಸ್ಲಿಂ ರಾಜ ನಿರ್ಮಿಸಿದ ಎಂಬ ಒಂದೇ ಕಾರಣಕ್ಕೆ ಬಿಜೆಪಿಯವರು ಅದನ್ನು ವಿರೋಧಿಸುತ್ತಿದ್ದಾರೆ. ಇದು ಆ ಪಕ್ಷ ಅಸಹಿಷ್ಣುತೆಯನ್ನು ತೋರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ದೇಶದ ಭವಿಷ್ಯದ ಬಗ್ಗೆ ಈ ವಿವಾದದ ಮೂಲಕ ಜನತೆ ಗಂಭೀರ ಚಿಂತನೆ ಮಾಡಬೇಕಿದ್ದು, ನಮ್ಮ ದೇಶದ ಎಂತಹ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದನ್ನು ಗಮನಿಸಬೇಕಿದೆ. ಬಿಜೆಪಿ ಪಕ್ಷ ಬೇಕೆಂದೇ ಅಯೋಧ್ಯೆ ಮತ್ತು ತಾಜ್ ಮಹಲ್ ವಿವಾದಗಳನ್ನು ಸೃಷ್ಟಿಸುತ್ತಿದ್ದು, ದೇಶದಲ್ಲಿ ಕೋಮು ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಅವರು ಇಂತಹ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿKeralaThiruvananthapuramಕೇರಳತಿರುವನಂತಪುರಂPinarayi Vijayanಪಿಣರಾಯಿ ವಿಜಯನ್Taj Mahal Issueತಾಜ್ ಮಹಲ್ ವಿವಾದ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


