ದೇಶ

ಯೋಧರೊಂದಿಗೆ ಸಮಯ ಕಳೆಯುವುದರ ಬದಲು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್

ದೇಶದ ಗಡಿ ಕಾಯುವ ಯೋಧರೊಂದಿಗೆ ಸಮಯ ಕಳೆಯುವುದರ ಬದಲಿಗೆ ಭಯೋತ್ಪಾದನೆ ವಿರುದ್ದ ಕ್ರಮ ಕೈಗೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಶುಕ್ರವಾರ ಹೇಳಿದೆ...

ಯೋಧರೊಂದಿಗೆ ಸಮಯ ಕಳೆಯುವುದರ ಬದಲು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :

ನವದೆಹಲಿ: ದೇಶದ ಗಡಿ ಕಾಯುವ ಯೋಧರೊಂದಿಗೆ ಸಮಯ ಕಳೆಯುವುದರ ಬದಲಿಗೆ ಭಯೋತ್ಪಾದನೆ ವಿರುದ್ದ ಕ್ರಮ ಕೈಗೊಳ್ಳಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಶುಕ್ರವಾರ ಹೇಳಿದೆ. 


ಜಮ್ಮು ಮತ್ತು ಕಾಶ್ಮೀರದ ಗುರೇಜ್ ಕಣಿವೆಯಲ್ಲಿ ದೇಶದ ಗಡಿ ಕಾಯುವ ಯೋಧರಿಗೆ ಸಹಿ ತಿನ್ನಿಸುವ ಮೂಲಕ ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೀಪಾವಳಿ ಹಬ್ಬವನ್ನು ಆಚರಿಸಿದರು. 

ಈ ಹಿನ್ನಲೆಯಲ್ಲಿ ಟೀಕೆ ಮಾಡಿರುವ ಕಾಂಗ್ರೆಸ್ ನಾಯಕ ಜೈ ಪ್ರಕಾಶ್ ಅಗರ್ವಾಲ್ ಅವರು, ದೀಪಾವಳಿ ಹಿನ್ನಲೆಯಲ್ಲಿ ಯೋಧರೊಂದಿಗೆ ಕಾಲಹರಣ ಮಾಡುವುದರಿಂದ ದೊಡ್ಡ ವ್ಯಕ್ತಿಯಾಗುವುದಿಲ್ಲ ಅಥವಾ ದೊಡ್ಡ ಹೆಮ್ಮೆ ಪಡುವಂತಹ ವಿಚಾರವಲ್ಲ. ಇದೇ ಯೋಧರು ಗಡಿಯಲ್ಲಿ ಸಾವನ್ನಪ್ಪಿದರೆ ಅಥವಾ ಹುತಾತ್ಮರಾದರೆ ಆ ಸಂದರ್ಭದಲ್ಲಿ ಮೋದಿಯವರು ಭೇಟಿ ನೀಡುತ್ತಾರೆಯೇ? ಅವರ ಕುಟುಂಬಸ್ಥರನ್ನು ಭೇಟಿ ಮಾಡುತ್ತಾರೆಯೇ? ಅಥವಾ ಹುತಾತ್ಮರಾದ ಯೋಧರ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆಯೇ...? ಪ್ರಸ್ತುತ ಮೋದಿಯವರು ಆಡುತ್ತಿರುವುದು ಒಂದು ಆಟವಾಗಿದ್ದು, ಇದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂದು ಹೇಳಿದ್ದಾರೆ. 

ಇದರಂತೆ ಮತ್ತೊಬ್ಬ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ಮಾತನಾಡಿ, ಯೋಧರು ಹುತಾತ್ಮರಾಗುವುದನ್ನು ಮೋದಿಯವರು ತಡೆಯಬೇಕು. ಯೋಧರೊಂದಿಗೆ ಸಮಯ ಕಳೆಯುವುದರಿಂದ ಏನೂ ಆಗದು. ಯೋಧರು ಹುತಾತ್ಮರಾಗುವುದು ನಿಲ್ಲಿತ್ತದೆ ಎಂಬುದರ ಕುರಿತು ಮೋದಿಯವರು ಭರವಸೆ ನೀಡಬೇಕು. ಅವರ ಕುಟುಂಬಸ್ಥರು ನೆಮ್ಮದಿಯಿಂದ ಇರುವಂತೆ ಮಾಡಬೇಕು. ಕೇವಲ ವಿಶೇಷ ದಿನಗಳಂದು ಮಾತ್ರ ಯೋಧರನ್ನು ಗುರ್ತಿಸುವುದನ್ನು ದೇಶ ಎಂದಿಗೂ ಒಪ್ಪಿವುದಿಲ್ಲ. ಮೋದಿಯವರು ಮೊದಲು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡು ದೇಶಕ್ಕಾಗಿ ತಮ್ಮ ಪ್ರಾಣದ ಹಂಗು ತೊರೆದು ಗಡಿ ಕಾಯುತ್ತಿರುವ ಯೋಧರನ್ನು ರಕ್ಷಣೆ ಮಾಡಬೇಕೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.