ದೇಶ

'ಯೋಧರೇ ನನ್ನ ಕುಟುಂಬ': ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಯೋಧರ ತಪಸ್ಸು ಮತ್ತು ತ್ಯಾಗಗಳನ್ನು...

'ಯೋಧರೇ ನನ್ನ ಕುಟುಂಬ': ಸೈನಿಕರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ
Published On :
ಶ್ರೀನಗರ: ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಯೋಧರ ತಪಸ್ಸು ಮತ್ತು ತ್ಯಾಗಗಳನ್ನು ಕೊಂಡಾಡಿದ್ದು, ಯೋಧರನ್ನು ನನ್ನದೇ ಕುಟುಂಬದಂತೆ ಭಾವಿಸುತ್ತೇನೆ ಎಂದಿದ್ದಾರೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲಿರುವ ಗುರೇಜ್ ಸೆಕ್ಟರ್ ಗೆ ಭೇಟಿ ನೀಡಿ, ಯೋಧರಿಗೆ ಸಿಹಿ ತಿನಿಸಿರುವ ಪ್ರಧಾನಿ ನರೇಂದ್ರ ಮೋದಿ, ಯೋಧರನ್ನುದ್ದೇಶಿಸಿ ಮಾತನಾಡಿದ್ದು, ಇತರರಂತೆಯೇ ನಾನೂ ಸಹ ತಮ್ಮ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಲು ಇಷ್ಟಪಡುತ್ತೇನೆ, ಯೋಧರು ನನ್ನ ಕುಟುಂಬದವರಾಗಿದ್ದು, ದೀಪಾವಳಿಯನ್ನು ಆಚರಿಸಲು ಬಂದಿರುವುದಾಗಿ ಹೇಳಿದ್ದಾರೆ. 
ಯೋಧರೊಂದಿಗೆ ಸಮಯ ಕಳೆದರೆ ಹೊಸ ಚೈತನ್ಯ ಮೂಡುತ್ತದೆ ಎಂದಿರುವ ಪ್ರಧಾನಿ ಪ್ರತಿಕೂಲ ಪರಿಸ್ಥಿತಿ, ವಾತಾವರಣದಲ್ಲಿಯೂ ಕಾರ್ಯ ನಿರ್ವಹಿಸುವ ಯೋಧರ ತಪಸ್ಸು ಹಾಗೂ ತ್ಯಾಗಳನ್ನು ಕೊಂಡಾಡಿದ್ದು, ಯೋಧರ ಹಿತಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.