ಪಂಜಾಬ್: ಓಬಿಸಿ, ಕೆನೆಪದರದ ವಾರ್ಷಿಕ ಆದಾಯ ಮಿತಿ ಹೆಚ್ಚಳ
ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇತರ ಹಿಂದುಳಿದ ವರ್ಗ (ಓಬಿಸಿ) ಮತ್ತು ಹಿಂದುಳಿದ ವರ್ಗಗಳ ಕೆನೆ ಪದರದ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು

Published On :
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇತರ ಹಿಂದುಳಿದ ವರ್ಗ (ಓಬಿಸಿ) ಮತ್ತು ಹಿಂದುಳಿದ ವರ್ಗಗಳ ಕೆನೆ ಪದರದ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು ಈಗಿರುವ 6 ಲಕ್ಷದಿಂದ 8 ಲಕ್ಷ ರೂ. ಗೆ ಹೆಚ್ಚಳ ಮಾಡಲು ಅನುಮೋದನೆ ನೀಡಿದ್ದಾರೆ.
ಓಬಿಸಿ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ಹೆಚ್ಚಿನ ಸಾಮಾಜಿಕ ನ್ಯಾಯ ಸಿಗಬೇಕೆನ್ನುವ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಅವರ ಆದಾಯ ಮಿತಿಯಲ್ಲಿ ಏರಿಕೆ ಮಾಡಲಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಈ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಓಬಿಸಿ ಮತ್ತು ಕೆನೆಪದರದವರ ವಾರ್ಷಿಕ ಒಟ್ಟು ಆದಾಯವನ್ನು 6 ರಿಂದ 8 ಲಕ್ಷ ರೂ.ಗೆ ಏರಿಸಿ ಆದೇಶ ಹೊರಡಿಸಿತ್ತು..
1993ರಲ್ಲಿ ಒಬಿಸಿ ಕೆನೆಪದರ ವಾರ್ಷಿಕ ಆದಾಯ ಮಿತಿ 1 ಲಕ್ಷ ರೂ.ಆಗಿದ್ದಿದ್ದನ್ನು 2004ರಲ್ಲಿ 2.5 ಲಕ್ಷಕ್ಕೆ ಏರಿಸಲಾಗಿತ್ತು. ಮತ್ತೆ 2008ರಲ್ಲಿ 4.5 ಲಕ್ಷ ಕ್ಕೆ, 2013ರಲ್ಲಿ 6ಲಕ್ಕಕ್ಕೆ ಏರಿಕೆ ಮಾಡಲಾಗಿತ್ತು. 1993ರಿಂದ ಈ ತನಕ ಒಟ್ಟು 4 ಬಾರಿ ಓಬಿಸಿ ಮತ್ತು ಹಿಂದುಳಿದ ವರ್ಗದ ಕೆನೆಪದರದವರ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಳ ಮಾಡಲಾಗಿದೆ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Punjabಪಂಜಾಬ್ಒಟ್ಟುPunjab Chief Minister Amarinder SinghOther Backward Classes (OBC)gross annual income limitಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ಇತರ ಹಿಂದುಳಿದ ವರ್ಗ (ಓಬಿಸಿ)
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


