ದೇಶ

ಆಧಾರ್‌ ಮತದಾನಕ್ಕೆ ಏಕೈಕ ಗುರುತು ಪತ್ರವಾಗಿ ಬಳಸಬಹುದು: ಮಾಜಿ ಸಿಇಸಿ ಕೃಷ್ಣಮೂರ್ತಿ

ಮತದಾನಕ್ಕೆ ಆಧಾರ್‌ ಕಾರ್ಡನ್ನೇ ಏಕೈಕ ಗುರುತು ಪತ್ರವಾಗಿ ಬಳಸಬಹುದಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ...

ಆಧಾರ್‌ ಮತದಾನಕ್ಕೆ ಏಕೈಕ ಗುರುತು ಪತ್ರವಾಗಿ ಬಳಸಬಹುದು: ಮಾಜಿ ಸಿಇಸಿ ಕೃಷ್ಣಮೂರ್ತಿ
ಆಧಾರ್
Published On :
ಹೈದರಾಬಾದ್‌: ಮತದಾನಕ್ಕೆ ಆಧಾರ್‌ ಕಾರ್ಡನ್ನೇ ಏಕೈಕ ಗುರುತು ಪತ್ರವಾಗಿ ಬಳಸಬಹುದಾಗಿದೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ ಎಸ್‌ ಕೃಷ್ಣಮೂರ್ತಿ ಅವರು ಮಂಗಳವಾರ ಹೇಳಿದ್ದಾರೆ.
ಪ್ರಸ್ತೂತ ಚುನಾವಣಾ ಆಯೋಗ ಮತದಾನಕ್ಕೆ ವೋಟರ್‌ ಐಡಿ ಕಾರ್ಡ್‌ ಇಲ್ಲದ ಸಂದರ್ಭಗಳಲ್ಲಿ ಪಾಸ್‌ಪೋರ್ಟ್‌ ಸೇರಿದಂತೆ ಹಲವಾರು ಬಗೆಯ ದಾಖಲೆ ಪತ್ರಗಳನ್ನು ಬಳಸುವುದಕ್ಕೆ ಅವಕಾಶ ನೀಡುತ್ತಿದೆ. 
"ಇಂದು ನಾವು ಮತದಾನಕ್ಕೆ ಹಲವಾರು ಬಗೆಯ ಗುರುತು ಪತ್ರಗಳನ್ನು ಬಳಸುತ್ತಿದ್ದೇವೆ ಮತ್ತು ಇದು ಹಲವಾರು ಬಗೆಯ ತೊಂದರೆ, ಗೊಂದಲಗಳಿಗೆ ಕಾರಣವಾಗಿದೆ. ಹೀಗಾಗಿ ಈ ಸಮಸ್ಯೆಯ ಶಾಶ್ವತ ನಿವಾರಣೆಗಾಗಿ ಮತದಾನಕ್ಕೆ ಒಂದೇ ಗುರುತು ಪತ್ರವನ್ನು ಬಳಸುವುದು ಒಳ್ಳೆಯದು. ಆಧಾರ್‌ ಕಾರ್ಡ್‌ ಈ ಉದ್ದೇಶಕ್ಕೆ ಉತ್ತಮವಾಗಿದೆ' ಎಂದು ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಆಧಾರ್‌ ಕಾರ್ಡನ್ನು ನೀವು ಬೇರೆಲ್ಲ ಉದ್ದೇಶಗಳಿಗೆ ಬಳಸುವಿರಾದರೆ ಮತದಾನಕ್ಕೂ ಅದೇ ಗುರುತು ಪತ್ರ ಬಳಸಬಹುದಾಗಿದೆ ಮತ್ತು ಅದರಿಂದ ಅನುಕೂಲವೂ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ದೇಶದಲ್ಲಿ ಬಹುತೇಕ ಎಲ್ಲರೂ ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಇನ್ನೂ ಅದನ್ನು ಹೊಂದದವರಿಗೆ 2019 ಅಥವಾ 2020ರ ವರೆಗೆ ಗಡುವು ನೀಡಬಹುದು. ನಂತರ ಆಧಾರ್‌ ಮತದಾನಕ್ಕೆ ಏಕೈಕ ಗುರುತು ಪತ್ರವೆಂದು ಕೇಂದ್ರ ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎಂದು ಕೃಷ್ಣಮೂರ್ತಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.