ದೆಹಲಿ ಕೋರ್ಟ್ ಬಳಿ ಪ್ರತಿಭಟನೆ: ನಾಪತ್ತೆಯಾದ ಜೆಎನ್ ಯು ವಿದ್ಯಾರ್ಥಿ ನಜೀಬ್ ತಾಯಿ ಬಂಧನ
ದೆಹಲಿ ಹೈಕೋರ್ಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ನಾಪತ್ತೆಯಾದ ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯ(ಜೆಎನ್ ಯು) ವಿದ್ಯಾರ್ಥಿ....

Published On :
ನವದೆಹಲಿ: ದೆಹಲಿ ಹೈಕೋರ್ಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ನಾಪತ್ತೆಯಾದ ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯ(ಜೆಎನ್ ಯು) ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ತಾಯಿ ಹಾಗೂ ಇತರೆ 30 ವಿದ್ಯಾರ್ಥಿಗಳನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆ ಪ್ರಕರಣದ ತನಿಖೆಯಲ್ಲಿ ಕೇಂದ್ರೀಯ ತನಿಖಾ ದಳ ತೀವ್ರ ನಿರಾಸಕ್ತಿ ತೋರುತ್ತಿದೆ ಎಂದು ಚಾಟಿ ಬೀಸಿದೆ.
ಕಳೆದ ಒಂದು ವರ್ಷದಿಂದ ನಜೀಬ್ ನಾಪತ್ತೆಯಾಗಿದ್ದು, ಆತನ ಪತ್ತೆ ಹಚ್ಚುವಲ್ಲಿ ಸಂಪೂರ್ಣ ನಿರಾಸಕ್ತಿ ತೋರಲಾಗಿದೆ ಎಂದು ಆರೋಪಿಸಿ ಇಂದು ನಜೀಬ್ ತಾಯಿ ಫಾತಿಮಾ ನಫೀಸ್ ಮತ್ತು ಜೆಎನ್ ಯು ವಿದ್ಯಾರ್ಥಿಗಳು ದೆಹಲಿ ಕೋರ್ಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೋರ್ಟ್ ಆವರಣ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ನಜೀಬ್ ತಾಯಿ ಸೇರಿದಂತೆ ಸುಮಾರು 35 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ ಬಿ ಕೆ ಸಿಂಗ್ ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ನಾಪತ್ತೆಯಾದ ಜೆಎನ್ ಯು ವಿದ್ಯಾರ್ಥಿ ಸುಳಿವು ಪತ್ತೆ ಹಚ್ಚಲು ಸಿಬಿಐ ಶಕ್ತವಾಗಿಲ್ಲ, ಪ್ರಕರಣದ ಬಗ್ಗೆ ಸಿಬಿಐ ಆಸಕ್ತಿ ತೋರುತ್ತಿಲ್ಲ, ಕಾಗದದ ಮೇಲೆ ಯಾವುದೇ ಫಲಿತಾಂಶವಿಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರೀಯ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿತ್ತು.
ಮೊದಲಿಗೆ ಪ್ರಕರಣವನ್ನು ದೆಹಲಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದರು, ಆದರೆ ದೆಹಲಿ ಪೊಲೀಸರ ತನಿಖೆಯಿಂದ ತೃಪ್ತವಾಗದ ಹಿನ್ನೆಲೆಯಲ್ಲಿ ಮೇ 16 ರಂದು ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.
ದೆಹಲಿ ಪೊಲೀಸರಿಂದ ಪ್ರಕರಣವನ್ನು ಪಡೆದ ಸಿಬಿಐ ತನಿಖೆಯಿಂದ ಯಾವುದೇ ಪ್ರಗತಿ ಕಂಡಿಲ್ಲ, ಪ್ರಕರಣ ಎಲ್ಲಿತ್ತೋ ಇನ್ನೂ ಅದೇ ಹಂತದಲ್ಲಿದೆ. ಅಕ್ಟೋಬರ್ 15, 2016 ರಂದು ಮಹಿ ಮಾಂಡೋವಿ ಹಾಸ್ಟೆಲ್ ನಿಂದ 27 ವರ್ಷದ ಎಂಎಸ್ಸಿ ಬಯೋ ಟೆಕ್ನಾಲಜಿ ವಿದ್ಯಾರ್ಥಿ ನಜೀಬ್ ಕಾಣೆಯಾಗಿದ್ದ. ಅತನನ್ನು ಪತ್ತೆ ಹಚ್ಚಲು ನಜೀಬ್ ಕುಟುಂಬಸ್ಥರು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


