ಹಿಂದೂ ಮಹಿಳೆ ಜತೆ ಹೊಟೇಲ್‍ನಲ್ಲಿದ್ದ ಮುಸ್ಲಿಂ ಯುವಕನಿಗೆ ಥಳಿತ
ಬರ್ಮೆರಾ ಜಿಲ್ಲೆಯ ಬಾಲೊಟ್ರ ಪ್ರದೇಶದಲ್ಲಿ ಹಿಂದೂ ಮಹಿಳೆಯೊಂದಿಗೆ ಹೊಟೇಲೆ ನಲ್ಲಿ ತಂಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ...

Published On :
ಬರ್ಮೆರಾ ಜಿಲ್ಲೆಯ ಬಾಲೊಟ್ರ ಪ್ರದೇಶದಲ್ಲಿ ಹಿಂದೂ ಮಹಿಳೆಯೊಂದಿಗೆ ಹೊಟೇಲೆ ನಲ್ಲಿ ತಂಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.
ಮುಸ್ಲಿಂ ಯುವಕನೊಂದಿಗೆ ರಜಪೂತ್ ಹಿಂದೂ ಮಹಿಳೆ ಹೊಟೇಲ್ ನಲ್ಲಿ ತಂಗಿರುವುದನ್ನು ತಿಳಿದುಕೊಂಡ ಮಹಿಳೆಯ ಸಂಬಂಧಿಕರು ಹೊಟೇಲ್ ಗೆ ಬಂದು ಮುಸ್ಲಿಂ ಯುವಕನನ್ನು ಆಚೆಗೆ ಎಳೆದು ಹಲ್ಲೆ ಮಾಡಿದ್ದಾರೆ ಎಂದು ಬರ್ಮೆರಾ ಎಡಿಎಸ್ಪಿ ಕೈಲಾಸದನ್ ರತ್ನೊ ಹೇಳಿದ್ದಾರೆ.
ಮಾನಸಸರೋವರ್ ಹೋಟೆಲ್ ಮಾಲೀಕ ಮುಲ್ತಾನ್ ಪರಿಹಾರ್ 25 ವರ್ಷದ ಪದು ಖಾನ್ ಎಂಬಾತ ಹಿಂದೂ ಮಹಿಳೆಯೊಂದಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಬಂದಿದ್ದ. ಇದಾದ ಒಂದೂವರೆ ಗಂಟೆ ನಂತರ ಮಹಿಳೆಯ ಸಂಬಂಧಿಕರು ಹೋಟೆಲ್ ಗೆ ಆಗಮಿಸಿ ತಮ್ಮ ವಿವರವನ್ನು ಹೇಳಿದರು.
ನನಗೆ ಸ್ವಲ್ಪ ಕೆಲಸವಿದ್ದ ಕಾರಣ ನಾನು ಅಲ್ಲಿಂದ ತೆರಳಿದೆ ಸ್ವಲ್ಪ ಸಮಯದ ನಂತರ ನನ್ನ ಹೋಟೆಲ್ ಸಿಬ್ಬಂದಿಗಳು ಕರೆ ಮಾಡಿ ತಿಳಿಸಿದರು. ಶಿವಸೇನೆ ಕಾರ್ಯಕರ್ತರು ಬಂದು ಪದು ಖಾನ್ ನನ್ನು ಹೊರಗೆ ಎಳೆದು ಥಳಿಸಿದರು ಎಂದು ಹೇಳಿದ್ದಾರೆ.
ಗುಂಪಿನಲ್ಲಿದ್ದರು ಪದು ಖಾನ್ ನನ್ನು ಥಳಿಸುವಾಗ ಜೈ ಶ್ರೀ ರಾಮ ಎಂದು ಕೂಗುತ್ತಿದ್ದರು. ಅಲ್ಲದೆ ಇದು ಲವ್ ಜಿಹಾದ್ ಎಂದು ಗುಂಪಿನವರು ಆರೋಪಿಸಿದ್ದು ತೀವ್ರವಾಗಿ ಗಾಯಗೊಂಡಿದ್ದ ಪದು ಖಾನ್ ನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ರತ್ನೋ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


