ಔಷಧ ಉತ್ಪನ್ನಗಳಿಗೆ ಭಾರತ 2 ನೇ ಅತಿ ದೊಡ್ದ ಮಾರುಕಟ್ಟೆ: ವರದಿ
ಜೈವಿಕ ತಂತ್ರಜ್ಞಾನ ಹಾಗೂ ಜಾಗತಿಕ ಔಷಧ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಶೇ.13.7 ರಷ್ಟು ಕೊಡುಗೆ ನೀಡಿರುವ ಭಾರತ ಔಷಧ ಉತ್ಪನ್ನಗಳಿಗೆ ವಿಶ್ವದಲ್ಲಿ 2 ನೇ ಮಾರುಕಟ್ಟೆಯಾಗಿದೆ ಎಂದು ನೆಟ್ವರ್ಕಿಂಗ್ ಕ್ಷೇತ್ರದ...

Published On :
ನವದೆಹಲಿ: ಜೈವಿಕ ತಂತ್ರಜ್ಞಾನ ಹಾಗೂ ಜಾಗತಿಕ ಔಷಧ ಕ್ಷೇತ್ರದಲ್ಲಿನ ಉದ್ಯೋಗಗಳಿಗೆ ಶೇ.13.7 ರಷ್ಟು ಕೊಡುಗೆ ನೀಡಿರುವ ಭಾರತ ಔಷಧ ಉತ್ಪನ್ನಗಳಿಗೆ ವಿಶ್ವದಲ್ಲಿ 2 ನೇ ಮಾರುಕಟ್ಟೆಯಾಗಿದೆ ಎಂದು ನೆಟ್ವರ್ಕಿಂಗ್ ಕ್ಷೇತ್ರದ ಅಗ್ರಗಣ್ಯ ಲಿಂಕ್ಡ್ ಇನ್ ವರದಿ ಹೇಳಿದೆ.
ದಿ ಇಂಡಿಯನ್ ಫಾರ್ಮಾ ಆಂಡ್ ಬಯೋಟೆಕ್ ಇಂಡಸ್ಟ್ರಿ ಎಂಬ ಇ-ಪುಸ್ತಕದಲ್ಲಿ ನೀಡಿರುವ ವರದಿಯ ಪ್ರಕಾರ ನವದೆಹಲಿ, ಕೋಲ್ಕತ್ತಾ, ಚಂಡೀಗಢ ಔಷಧಿ ಉತ್ಪನ್ನಗಳ ವಲಯದಲ್ಲಿ ಅತಿ ಹೆಚ್ಚು ಅಭಿವೃದ್ಧಿಯಾಗುತ್ತಿರುವ ರಾಜ್ಯಗಳಾಗಿದ್ದು, ಅಮೆರಿಕಾಗೆ ಹೆಚ್ಚಿನ ಪ್ರತಿಭೆಗಳು ಪಲಾಯನವಾಗುತ್ತಿವೆ ಎಂದು ತಿಳಿದುಬಂದಿದೆ.
ಅಮೆರಿಕಾದ ಫಾರ್ಮಾ ಹಾಗೂ ಬಯೋ ಟೆಕ್ ಇಂಡಸ್ಟ್ರಿಯಲ್ಲಿನ ಶೇ.48 ರಷ್ಟು ಪ್ರತಿಭೆಗಳು ಭಾರತಕ್ಕೆ ಬರುತ್ತಿದ್ದು, ಭಾರತದಿಂದ ಅಮೆರಿಕಾಗೆ ಶೇ.36 ರಷ್ಟು ಪ್ರತಿಭೆಗಳು ಹೋಗುತ್ತಿವೆ ಎಂದು ಲಿಂಕ್ಡ್ ಇನ್ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಸಂಶೋಧಕರು, ವಿಜ್ಞಾನಿಗಳು, ಗುಣಮಟ್ಟ ಪರೀಕ್ಷೆ ನಡೆಸುವ ವೃತ್ತಿಪರರು ಸೇರಿದಂತೆ ಪ್ರಮುಖ ಪ್ರತಿಭೆಗಳು ಬೇರೆ ದೇಶಗಳಿಗೆ ತೆರಳುತ್ತಿದ್ದರೆ, ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ವಿಭಾಗದ ಪ್ರತಿಭೆಗಳು ಬರುತ್ತಿವೆ ನಂತರದ ಸ್ಥಾನದಲ್ಲಿ ಸಂಶೋಧಕರು, ವಿಜ್ಞಾನಿಗಳು, ಗುಣಮಟ್ಟ ಪರೀಕ್ಷೆ ನಡೆಸುವ ವೃತ್ತಿಪರರು ಸೇರಿದಂತೆ ಪ್ರಮುಖ ಪ್ರತಿಭೆಗಳು ಬರುತ್ತಿದ್ದಾರೆ ಎಂದು ವರದಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


