ದೇಶ

ಶೋಪಿಯಾನ್ ಎನ್ ಕೌಂಟರ್: ಹಿಜ್ಬುಲ್ ಸಂಘಟನೆಯ ಇಬ್ಬರು, ಓರ್ವ ಎಲ್ ಇಟಿ ಉಗ್ರನ ಹತ್ಯೆ: ಸೇನೆ ಸ್ಪಷ್ಟನೆ

ಸೋಮವಾರ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಹಾಗೂ ಓರ್ವ ಎಲ್ ಇಟಿ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶೋಪಿಯಾನ್ ಎನ್ ಕೌಂಟರ್: ಹಿಜ್ಬುಲ್ ಸಂಘಟನೆಯ ಇಬ್ಬರು, ಓರ್ವ ಎಲ್ ಇಟಿ ಉಗ್ರನ ಹತ್ಯೆ: ಸೇನೆ ಸ್ಪಷ್ಟನೆ
ಎನ್ ಕೌಂಟರ್ (ಸಂಗ್ರಹ ಚಿತ್ರ)
Published On :
ಶ್ರೀನಗರ: ಸೋಮವಾರ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಉಗ್ರರು ಹಾಗೂ ಓರ್ವ ಎಲ್ ಇಟಿ ಉಗ್ರನನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ಸೇನೆಯ  ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶ್ರೀನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶೋಪಿಯಾನ್ ನಲ್ಲಿ ಸೇನಾಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಈ ಮೂವರ ಪೈಕಿ ಇಬ್ಬರು ಉಗ್ರರು ಹಿಜ್ಬುಲ್  ಮುಜಾಹಿದ್ದೀನ್ ಸಂಘಟನೆಗೆ ಸೇರಿದವರಾಗಿದ್ದು, ಓರ್ವ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನಾಗಿದ್ದಾನೆ ಎಂದು ಭಾರತೀಯ ಸೇನಾಪಡೆಯ ಕಮಾಂಡಿಂಗ್ ಆಫೀಸರ್ ಹೇಳಿದ್ದಾರೆ. ಇನ್ನು ಎನ್ ಕೌಂಟರ್ ನಲ್ಲಿ  ಹಿಜ್ಬುಲ್ ಮುಜಾಹಿದ್ದೀನ್ ನ ಕಾಶ್ಮೀರ ಪ್ರಾಂತ್ಯದ ಪ್ರಮುಖ ನೇಮಕಾತಿದಾರ ಜಾಹೀದ್, ಉಗ್ರ ಇರ್ಫಾನ್ ಹಾಗೂ ಎಲ್ ಇಟಿ ಉಗ್ರ ಆಸಿಫ್ ನನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ತಿಳಿಸಿದೆ.

ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ಸೇನೆ ಸ್ಥಳವನ್ನು ಸುತ್ತುವರೆದು ಉಗ್ರರ ಬಂಧನಕ್ಕೆ ಯತ್ನಿಸಿತ್ತು. ಆದರೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿ ನಡೆಸಲಾಯಿತು. ಈ ವೇಳೆ ಮೂರು ಉಗ್ರರು  ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ಬಾರಾಮುಲ್ಲಾದ ನಡೆದ ಎನ್ ಕೌಂಟರ್ ನಲ್ಲಿ ಜೈಶ್ ಇ ಮೊಹಮದ್ ಉಗ್ರ ಕಮಾಂಡರ್ ಉಮರ್ ಖಲೀದ್ ಸಾವನ್ನಪ್ಪಿದ್ದಾನೆ ಎಂದು ಸೇನೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.