ದೇಶ

ಜಿಎಸ್ ಟಿ, ಡೀಸೆಲ್ ದರ ನಿತ್ಯ ಪರಿಷ್ಕರಣೆ ವಿರೋಧಿಸಿ ಲಾರಿ ಮುಷ್ಕರ ಆರಂಭ

ಜಿಎಸ್ ಟಿ ಮತ್ತು ಡೀಸೆಲ್ ದರ ನಿತ್ಯ ಪರಿಷ್ಕರಣೆ ಮಾಡುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಲಾರಿ ಮಾಲೀಕರು....

ಜಿಎಸ್ ಟಿ, ಡೀಸೆಲ್ ದರ ನಿತ್ಯ ಪರಿಷ್ಕರಣೆ ವಿರೋಧಿಸಿ ಲಾರಿ ಮುಷ್ಕರ ಆರಂಭ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜಿಎಸ್ ಟಿ ಮತ್ತು ಡೀಸೆಲ್ ದರ ನಿತ್ಯ ಪರಿಷ್ಕರಣೆ ಮಾಡುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಲಾರಿ ಮಾಲೀಕರು ಸೋಮವಾರದಿಂದ ಎರಡು ದಿನಗಳ ಮುಷ್ಕರ ಆರಂಭಿಸಿದ್ದು, ಸಾವಿರಾರು ಲಾರಿಗಳು ರಸ್ತೆಗಿಳಿಯದಿರುವುದರಿಂದ ನಿತ್ಯ ಬಳಕೆಯ ವಸ್ತುಗಳ ಪೂರೈಕೆಯಲ್ಲಿ  ಭಾರಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಇಂದು ಬೆಳಗ್ಗೆ 8 ಗಂಟೆಯಿಂದ ಲಾರಿ ಮುಷ್ಕರ ಆರಂಭವಾಗಿದ್ದು, ಕೊನೆ ಗಳಿಯಲ್ಲಿ ಸರ್ಕಾರ ಮತ್ತು ಲಾರಿ ಮಾಲೀಕರ ನಡುವಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡುತ್ತಿರುವುದಾಗಿ ಅಖಿಲ ಭಾರತ ಮೊಟಾರ್ ಸಾರಿಗೆ ಕಾಂಗ್ರೆಸ್ ಹೆಚ್ಚುವರಿ ಉಪಾಧ್ಯಕ್ಷ ಹರೀಶ್ ಸಭರವಾಲ್ ಅವರು ಹೇಳಿದ್ದಾರೆ.

ನಾವು ಇಂದು ಮತ್ತು ನಾಳೆ ದೇಶಾದ್ಯಂತ ಮುಷ್ಕರ ನಡೆಸುತ್ತಿದ್ದು, ಯಾವುದೇ ಲಾರಿಗಳು ರಸ್ತೆಗಳಿಯುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮುಷ್ಕರ ನಡೆಸುತ್ತಿದ್ದೇವೆ, ಈ ಮುಷ್ಕರದಿಂದ ಲಾರಿ ಮಾಲೀಕರಿಗೆ 2 ಸಾವಿರ ಕೋಟಿ ರುಪಾಯಿ ನಷ್ಟವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮುಷ್ಕರ ನಿರತರ ಪ್ರಮುಖ ಬೇಡಿಕೆಗಳು
ಹೆಚ್ಚುವರಿ ತೆರಿಗೆ ಸಂಗ್ರಹ ನಿಲ್ಲಿಸಬೇಕು.
ದೇಶವ್ಯಾಪಿ ಏಕ ರೂಪದ ಡೀಸೆಲ್ ದರ ಜಾರಿಗೆ ಬರಬೇಕು.
347 ಹೆದ್ದಾರಿ ಟೋಲ್ ರದ್ದುಪಡಿಸಿ ವಾರ್ಷಿಕ ಒಂದು ಬಾರಿ ಟೋಲ್ ನಿಯಮ ಜಾರಿ ಮಾಡಬೇಕು.
ಹೆದ್ದಾರಿಗಳಲ್ಲಿ ಸಾರಿಗೆ ಅಧಿಕಾರಿಗಳು ನೀಡುವ ಕಿರುಕುಳ ನಿಲ್ಲಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.