ಪಂಚಕುಲದಲ್ಲಿ ಹಿಂಸಾಚಾರ ಸೃಷ್ಟಿಸಲು ರೂ.1.25 ಕೋಟಿ ನೀಡಿದ್ದ ಹನಿಪ್ರೀತ್!
ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಪಂಚಕುಲದಲ್ಲಿ ಹಿಂಸಾಚಾ ಸೃಷ್ಟಿಸುವ ಸಲುವಾಗಿ ಹನಿಪ್ರೀತ್...

Published On :
ಚಂಡೀಗಢ: ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಪಂಚಕುಲದಲ್ಲಿ ಹಿಂಸಾಚಾ ಸೃಷ್ಟಿಸುವ ಸಲುವಾಗಿ ಹನಿಪ್ರೀತ್ ಇನ್ಸಾನ್ ಬರೋಬ್ಬರಿ ರೂ.1.25 ಕೋಟಿ ಹಣವನ್ನು ನೀಡಿದ್ದಳು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.
ಗುರ್ಮಿತ್ ರಾಮ್ ರಹೀಮ್ ಚಾಲಕ ರಾಕೇಶ್ ಕುಮಾರ್ ಪ್ರಸ್ತತು ವಿಶೇಷ ತನಿಖಾ ದಳದ ವಶದಲ್ಲಿದ್ದು, ಅಧಿಕಾರಿಗಳು ರಾಕೇಶ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಗುರ್ಮಿತ್ ವಿರುದ್ಧ ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಹಿಂಸಾಚಾರ ಸೃಷ್ಟಿಸಲು ಹನಿಪ್ರೀತ್ ರೂ.1.25 ಕೋಟಿ ಹಣವನ್ನು ಸಂದಾಯ ಮಾಡಿದ್ದಳು ಎಂದು ಹೇಳಿಕೊಂಡಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಪಂಚಕುಲದಲ್ಲಿ ಸೃಷ್ಟಿಯಾಗಿದ್ದ ಹಿಂಸಾಚಾರ ಕುರಿತಂತೆ ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಪೊಲೀಸ್ ಆಯುಕ್ತ ಎ.ಎಸ್. ಚಾವ್ಲಾ ಅವರು, ಪಂಚಕುಲ ಹಿಂಸಾಚಾರದಲ್ಲಿ ಹನಿಪ್ರೀತ್ ಕೈವಾಡವಿರುವ ಕುರಿತಂತೆ ನಮಗೆ ಬಲವಾದ ಸಾಕ್ಷ್ಯಾಧಾರಗಳು ದೊರಕಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Gurmeet Ram Rahim Singhಗುರ್ಮಿತ್ ರಾಮ್ ರಹೀಮ್ ಸಿಂಗ್Honeypreet Insanಹನಿಪ್ರೀತ್ ಇನ್ಸಾನ್Panchakula Violenceಪಂಚಕುಲ ಹಿಂಸಾಚಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


