ಗಝಲ್ ದಂತಕಥೆ ಬೇಗಂ ಅಖ್ತರ್ ಗೆ ಗೂಗಲ್ ಡೂಡಲ್
ಗಝಲ್ ದಂತಕಥೆ ಬೇಗಂ ಅಖ್ತರ್ ಅವರ 103ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ನಮನ ಸಲ್ಲಿಸಿದೆ...

Published On :
ದೆಹಲಿ: ಗಝಲ್ ದಂತಕಥೆ ಬೇಗಂ ಅಖ್ತರ್ ಅವರ 103ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ನಮನ ಸಲ್ಲಿಸಿದೆ.
ಬೇಗಂ ಅಖ್ತರ್ ಅವರು ಉತ್ತರ ಪ್ರದೇಶದ ಭದರ್ಸಾದಲ್ಲಿ 1914ರ ಅಕ್ಟೋಬರ್ 7ರಂದು ಜನಿಸಿದರು. ಗಝಲ್, ಟುಮ್ರಿ, ದಾದರಾ ಗಾಯನದಲ್ಲಿ ಅವರು ಹೆಸರು ಮಾಡಿದ್ದರು. ಶನಿವಾರ ಅವರ 103ನೇ ಹುಟ್ಟುಹಬ್ಬದ ಅಂಗವಾಗಿ ಕಲೆಯ ಮೂಲಕ ನಮನ ಸಲ್ಲಿಸಿದೆ.
ಹಲವು ಹಿಂದಿ ಸಿನಿಮಾಗಳ ಗೀತೆಗಳಿಗೆ ದನಿಯಾಗಿದ್ದ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಪದ್ಮಶ್ರೀ, ಪದ್ಮ ಭೂಷಣ, ಕೇಂದ್ರ ಸಂಗೀತ– ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.
ಬಾಲಕಿಯಾಗಿದ್ದಾಗಲೇ ಲಕ್ನೋದಲ್ಲಿ ಬೇಗಂ ಅಖ್ತರ್ ತಮ್ಮ ವೃತ್ತಿ ಜೀವನ ಆರಂಭಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


