ಎಲ್ಲಾ ರಾಷ್ಟ್ರಗಳು ಸಮುದ್ರ ಕಾನೂನಿಗೆ ಬದ್ಧವಾಗಿರಬೇಕು: ಯುಎನ್ ಸಿಎಲ್ಒಎಸ್ ನಲ್ಲಿ ರಾಮ್ ಮಾಧವ್
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಚಟುವಟಿಕೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧಾವ್ ಎಲ್ಲಾ ರಾಷ್ಟ್ರಗಳೂ ಸಮುದ್ರ..

Published On :
ಅಂಡಮಾನ್ ನಿಕೋಬಾರ್: ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ತನ್ನ ಚಟುವಟಿಕೆಗಳನ್ನು ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧಾವ್ ಎಲ್ಲಾ ರಾಷ್ಟ್ರಗಳೂ ಸಮುದ್ರ ಕಾನೂನಿಗೆ ಬದ್ಧವಾಗಿರಬೇಕು ಎಂದು ಕರೆ ನೀಡಿದ್ದಾರೆ.
ರಾಷ್ಟ್ರದ ಸಂವಿಧಾನವನ್ನು ಜನರು ತಿಳಿದುಕೊಂಡು ಜಾರಿಗೆ ತರುವಂತೆಯೇ ಸಮುದ್ರಕ್ಕೆ ಸಂಬಂಧಿಸಿದ ಕಾನೂನನ್ನು ರಾಷ್ಟ್ರಗಳೂ ಪಾಲಿಸಬೇಕಿದೆ ಎಂದು ಸಮುದ್ರಕ್ಕೆ ಸಂಬಂಧಿಸಿದ ಸಮಾವೇಶ (ಯುಎನ್ ಸಿಎಲ್ಒಎಸ್)ದಲ್ಲಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ಯುಎನ್ ಸಿಎಲ್ಒಎಸ್ ನ್ನು ಇಂಡಿಯಾ ಫೌಂಡೇಶನ್ ಆಯೋಜಿಸಿದ್ದು ಸಮುದ್ರ ಸಂಪನ್ಮೂಲಗಳ ಬಳಕೆ, ಸಮುದ್ರ ಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳಿಗೆ ಕಾನೂನಿನ ಚೌಕಟ್ಟನ್ನು ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಅ.5 ರಿಂದ ಅಂಡಮಾನ್ ನಿಕೋಬಾರ್ ನಲ್ಲಿ ಪ್ರಾರಂಭವಾಗಿರುವ ಯುಎನ್ ಸಿಎಲ್ಒಎಸ್ ನಲ್ಲಿ ಫಿಲಿಪೇನ್ಸ್, ಲಾವೋಸ್, ಥಾಯ್ ಲ್ಯಾಂಡ್, ಸಿಂಗಪೂರ್, ಮಯನ್ಮಾರ್, ಇಂಡೋನೇಷ್ಯಾ, ವಿಯೆಟ್ನಾಂ, ಜಪಾನ್ ಹಾಗೂ ಜರ್ಮನಿಯ ದೇಶಗಳ ರಾಯಭಾರಿಗಳು ಭಾಗಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


