ನೋಟು ನಿಷೇಧದ ಬಳಿಕ ಅಪಾರ ಪ್ರಮಾಣದ ಅಕ್ರಮ ಹಣ ವರ್ಗಾವಣೆ: ಕೇಂದ್ರ ಸರ್ಕಾರ
ನೋಟು ನಿಷೇಧದ ಬಳಿಕ ದೇಶಾದ್ಯಂತ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

Published On :
ನವದೆಹಲಿ: ನೋಟು ನಿಷೇಧದ ಬಳಿಕ ದೇಶಾದ್ಯಂತ ಅಪಾರ ಪ್ರಮಾಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
ಈ ಬಗ್ಗೆ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿತ್ತ ಸಚಿವಾಲಯ, ನೋಟ ನಿಷೇಧದ ಬಳಿಕ ಸುಮಾರು 5800ಕ್ಕೂ ಅಧಿಕ ನಾಮ್ ಕೇ ವಾಸ್ತೆ ಸಂಸ್ಥೆಗಳ ಮೂಲಕ ಸುಮಾರು 4,574 ಕೋಟಿ ಹಣ ವಿವಿಧ ಬ್ಯಾಂಕುಗಳಿಗೆ ಜಮಾವಣೆಯಾಗಿದ್ದು, ಬಳಿಕ 4,552 ಕೋಟಿ ರು.ಗಳನ್ನು ವಿತ್ ಡ್ರಾ ಮಾಡಲಾಗಿದೆ. ನೋಟು ನಿಷೇಧಕ್ಕೂ ಮೊದಲು ಈ ಕಂಪನಿಗಳ ಖಾತೆಗಳಲ್ಲಿ ಶೂನ್ಯ ಠೇವಣಿ ನಿರ್ವಹಿಸಿದ್ದ ದಾಖಲೆಗಳು ಪತ್ತೆಯಾಗಿದ್ದು, ನೋಟು ನಿಷೇಧವಾಗುತ್ತಿದ್ದಂತೆಯೇ ಈ ಕಂಪನಿಗಳ ಖಾತೆಗಳಲ್ಲಿ ನೂರಾರು ಕೋಟಿ ಹಣ ಜಮೆಯಾಗಿದ್ದು ಹೇಗೆ ಎಂಬ ವಿಚಾರ ಶಂಕೆ ಮೂಡಿಸುತ್ತಿದೆ.
ಇದೇ ಕಾರಣಕ್ಕಾಗಿ ಅಕ್ರಮ ಹಣ ವರ್ಗಾವಣೆಯಾಗಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಈ ಖಾತೆಗಳಿಗೆ ಸಂಬಂಧಿಸಿದಂತೆ ಒಟ್ಟು 13 ವಿವಿಧ ಬ್ಯಾಂಕ್ ಗಳಿಂದ ಮಾಹಿತಿ ಪಡೆಯಲಾಗಿದೆ. ಬ್ಯಾಂಕ್ ಗಳು ನೀಡಿರುವ ಮಾಹಿತಿಯಂತೆ ನೋಟು ನಿಷೇಧದ ಬಳಿಕ ನಡೆದ ಸುಮಾರು 2,09,032 ಕೋಟಿ ವಹಿವಾಟುಗಳು ಶಂಕಾಸ್ಪದವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಕಳೆದ ವಾರವಷ್ಟೇ ಮೋದಿ ಸರ್ಕಾರ, 4.5 ಲಕ್ಷ ಶೆಲ್ ಕಂಪನಿಗಳನ್ನು ಗುರುತಿಸಿ (ಹೆಸರಿಗಷ್ಟೇ ಆರಂಭವಾಗಿರುವ ಕಂಪನಿಗಳು) ಈ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ನಿರ್ದೇಶಕರಿಗೆ ಕಠಿಣ ಸಂದೇಶ ರವಾನಿಸಿತ್ತು.ಕೇವಲ ಹೆಸರಿಗಷ್ಟೇ ಕಾರ್ಯನಿರ್ವಹಿಸುತ್ತಿರುವ 2,17,239 ಕಂಪನಿಗಳನ್ನು ಈಗಾಗಲೇ ದಾಖಲೆಗಾಳಿಂದ ತೆಗೆದು ಹಾಕಲಾಗಿದ್ದು, ಅಂತಹ ಸಂಸ್ಥೆಗಳು ಹಾಗೂ ಅವುಗಳೊಂದಿಗೆ ನಂಟು ಹೊಂದಿದ್ದ ನಿರ್ದೇಶಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಸ್ಪಷ್ಟಪಡಿಸಿತ್ತು. ಅಂತೆಯೇ ಸೆ.22 ರ ವರೆಗೆ 3,19,637 ನಿರ್ದೇಶಕರನ್ನು ಗುರುತಿಸಲಾಗಿದ್ದು, ಕಂಪನಿ ಕಾಯ್ದೆ 2013 ರ ಸೆಕ್ಷನ್ 164 (2) (a) ಪ್ರಕಾರ ಅನರ್ಹಗೊಳಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಸರ್ಕಾರ ಎಚ್ಚರಿಕೆ ನೀಡಿತ್ತು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಕೇಂದ್ರ ಸರ್ಕಾರmoney-launderingunion Governmentಅಕ್ರಮ ಹಣ ವರ್ಗಾವಣೆDemonetisationನೋಟು ನಿಷೇಧ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.