ಪೆರೋಲ್ ಮೇಲೆ ಶಶಿಕಲಾ ಬಿಡುಗಡೆ, ಕೈದಿ ನಂ.9234ಗೆ ವಿಧಿಸಿದ ಷರತ್ತುಗಳು ಏನು ಗೊತ್ತಾ?
ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಶುಕ್ರವಾರ ಪರಪ್ಪನ....

Published On :
ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ಶುಕ್ರವಾರ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಅನಾರೋಗ್ಯಪೀಡಿತ ಅವರ ಪತಿಯನ್ನು ಭೇಟಿ ಮಾಡುವುದಕ್ಕಾಗಿ ಐದು ದಿನಗಳ ಕಾಲ ಪೆರೋಲ್ ನೀಡಿದ್ದಾರೆ. ಆದರೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ಆಪ್ತೆಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಶಶಿಕಲಾ ಕೈದಿ ನಂ.9234 ಅಕ್ಟೋಬರ್ 7ರಿಂದ 11ರ ವರೆಗೆ ಪೆರೋಲ್ ನೀಡಲಾಗಿದ್ದು, ಈ ಐದು ದಿನಗಳ ಅವಧಿಯಲ್ಲಿ ಪತಿಯ ಭೇಟಿಯನ್ನು ಹೊರತುಪಡಿಸಿ ಬೇರೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಿರುವಂತೆ ಸೂಚಿಸಲಾಗಿದೆ.
ಮನೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಬೇರೆ ಯಾರನ್ನೂ ಭೇಟಿ ಮಾಡದಂತೆ ಹಾಗೂ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳದಂತೆ ಷರತ್ತು ವಿಧಿಸಲಾಗಿದೆ.
ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದಂತೆಯೂ ಎಐಎಡಿಎಂಕೆ ನಾಯಕಿಗೆ ಸೂಚಿಸಲಾಗಿದ್ದು, ಚೆನ್ನೈ ಪೊಲೀಸರು ಶಶಿಕಲಾ ಅವರ ಮೇಲೆ ನಿಗಾವಹಿಸಲಿದ್ದಾರೆ.
ಶಶಿಕಲಾ ಅವರು ಶುಕ್ರವಾರ ಸಂಜೆ ಚೆನ್ನೈಗೆ ತೆರಳಿ ತಮ್ಮ ಪತಿಯನ್ನು ಭೇಟಿ ಮಾಡಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟರಾಜನ್ ಕಿಡ್ನಿ ಹಾಗೂ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪರಪ್ಪನ ಅಗ್ರಹಾರ ಜೈಲುಶಶಿಕಲಾSasikalaನಟರಾಜನ್Parappana Agrahara prisonNatarajan5 days parole5 ದಿನಗಳ ಪೆರೋಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


