ದೇಶ

ಆಂಧ್ರದಲ್ಲಿ ನೌಕರಿ ಪಡೆಯಲು ತೆಲುಗು ಕಡ್ಡಾಯ ಮಾಡಿ: ವೆಂಕಯ್ಯ ನಾಯ್ಡು

ಆಂಧ್ರಪ್ರದೇಶ ಶಾಲೆಗಳಲ್ಲಿ ತೆಲುಗು ಕಡ್ಡಾಯ ಮಾಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಕ್ರಮವನ್ನು....

ಆಂಧ್ರದಲ್ಲಿ ನೌಕರಿ ಪಡೆಯಲು ತೆಲುಗು ಕಡ್ಡಾಯ ಮಾಡಿ: ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು - ಚಂದ್ರಬಾಬು ನಾಯ್ಡು
Published On :
ವಿಜಯವಾಡ: ಆಂಧ್ರಪ್ರದೇಶ ಶಾಲೆಗಳಲ್ಲಿ ತೆಲುಗು ಕಡ್ಡಾಯ ಮಾಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಕ್ರಮವನ್ನು ಶ್ಲಾಘಿಸಿದ ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಒಂದು ಹೆಜ್ಜೆ ಮುಂದೆ ಹೋಗಿ, ಆಂಧ್ರದಲ್ಲಿ ಉದ್ಯೋಗ ಪಡೆಯಲು ತೆಲುಗು ಕಡ್ಡಾಯ ಮಾಡುವಂತೆ ಸಲಹೆ ನೀಡಿದ್ದಾರೆ.
ಇಂದು ವಿಜಯವಾಡದಲ್ಲಿ ಕೆಲ ರಾಷ್ಟ್ರೀಯ ಹೆದ್ದಾರಿಯ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಆಂಧ್ರಪ್ರದೇಶದಲ್ಲಿ ನೌಕರಿ ಪಡೆಯಲು ಕಡ್ಡಾಯವಾಗಿ ತೆಲುಗು ಗೊತ್ತಿರಬೇಕು ಮತ್ತು ಶಾಲೆಗಳಲ್ಲಿ ಮಾಧ್ಯಮದ ಹೊರತಾಗಿಯೂ ಎಲ್ಲಾ ವಿದ್ಯಾರ್ಥಿಗಳಿಗೆ ತೆಲುಗು ಕಡ್ಡಾಯಗೊಳಿಸಬೇಕು ಎಂದು ಹೇಳಿದ್ದಾರೆ.
ನಾನು ಇತರೆ ಭಾಷೆಗಳ ವಿರೋಧಿ ಅಲ್ಲ. ಆದರೆ ಇತರ ಭಾಷೆಗಳನ್ನು ಅನುಸರಿಸುವ ಮೊದಲು ತಮ್ಮ ಸ್ವಂತ ಮಾತೃ ಭಾಷೆಯಲ್ಲಿ ಸಾಕಷ್ಟು ಪ್ರಬುದ್ಧರಾಗಿರಲು ಜನರು ಬಯಸುತ್ತಾರೆ ಎಂದು ಉಪ ರಾಷ್ಟ್ರಪತಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.