ದೇಶ

ಅಲಹಾಬಾದ್: ರೈಲಿನಡಿ ಸಿಕ್ಕು ಮೂವರು ಮಹಿಳೆ ಸೇರಿ ನಾಲ್ವರ ಸಾವು

ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ನೈನಿ ಜಂಕ್ಷನ್ ಬಳಿ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿನಡಿ ಸಿಕ್ಕು ಮೂವರು ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾ

ಅಲಹಾಬಾದ್: ರೈಲಿನಡಿ ಸಿಕ್ಕು ಮೂವರು ಮಹಿಳೆ ಸೇರಿ ನಾಲ್ವರ ಸಾವು
ಫೈಲ್ ಚಿತ್ರ
Published On :
ಲಖ್ನೋ: ಉತ್ತರ ಪ್ರದೇಶದ ಅಲಹಾಬಾದ್ ಜಿಲ್ಲೆಯ ನೈನಿ ಜಂಕ್ಷನ್ ಬಳಿ ರೈಲ್ವೆ ಹಳಿ ದಾಟುತ್ತಿದ್ದ ವೇಳೆ ರೈಲಿನಡಿ ಸಿಕ್ಕು ಮೂವರು ಮಹಿಳೆಯರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಹಳಿ ದಾಟುತ್ತಿದ್ದ ಸಮಯದಲ್ಲಿ ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ ನಡಿ ಸಿಕ್ಕು ಅವರು ಮೃತರಾದರೆಂದು ಪೋಲೀಸರು ತಿಳಿಸಿದ್ದಾರೆ. 
ಬೆಳೆಗ್ಗೆ ಸುಮಾರು 3:30ರ ಸುಮಾರಿಗೆ ಘಟನೆ ಸಂಭವಿಸಿದೆ ಎಂಡು ಪೋಲೀಸರು ಹೇಳಿದ್ದಾರೆ.
ಮೃತರನ್ನು  ಚಂಕಾ ನಿವಾಸಿ ರಾಮ್ ಬಂಧೂರ್ ಪತ್ನಿ  ಸುಶಿಲಾ ದೇವಿ (46), ಮಗಳು ಶೀಲು ಲತಾ(15)   ಸಂಬಂಧಿಗಳಾದ ಬ್ರಿಜ್ ಕಲಿ(55), ವಿಜಯ್ ಕುಮಾರ್(28) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ನಾಲ್ವರು ತಮ್ಮ ಹಳ್ಳಿಗೆ ಮರಳಲು ಕಾಲುದಾರಿ ಮೂಲಕ ಸಾಗುತ್ತಿದ್ದರು. ಮಾರ್ಗದಲ್ಲಿದ್ದ ರೈಲ್ವೆ ಸೇತುವೆಯನ್ನು ಹಾದು ಹೋಗುವಾಗ  ರೈಲು ಬಂದ ಕಾರಣ ರೈಲಿನ ಅಡಿ ಸಿಲುಕಿ ಮೃತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.