ದೇಶ

ಪದ್ಮಾವತಿ ಚಿತ್ರದ 'ಘೂಮರ್' ಹಾಡಿಗೆ ಹೆಜ್ಜೆ ಹಾಕಿದ ಮುಲಾಯಂ ಸಿಂಗ್ ಯಾದವ್ ಸೊಸೆ

ಭಾರಿ ಚರ್ಚೆಗೆ ಕಾರಣವಾಗಿರುವ ಪದ್ಮಾವತಿ ಸಿನಿಮಾದ ಹಾಡಿಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಹೆಜ್ಜೆ ಹಾಕಿದ್ದಾರೆ.

ಪದ್ಮಾವತಿ ಚಿತ್ರದ 'ಘೂಮರ್' ಹಾಡಿಗೆ ಹೆಜ್ಜೆ ಹಾಕಿದ ಮುಲಾಯಂ ಸಿಂಗ್ ಯಾದವ್ ಸೊಸೆ
ಪದ್ಮಾವತಿ ಚಿತ್ರದ 'ಘೂಮರ್' ಹಾಡಿಗೆ ಹೆಜ್ಜೆ ಹಾಕಿದ ಅಪರ್ಣಾ ಯಾದವ್
Published On :
ಲಖನೌ: ಭಾರಿ ಚರ್ಚೆಗೆ ಕಾರಣವಾಗಿರುವ ಪದ್ಮಾವತಿ ಸಿನಿಮಾದ ಹಾಡಿಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್‌ ಹೆಜ್ಜೆ ಹಾಕಿದ್ದಾರೆ. 
ಮುಲಾಂಯ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್‌ ಯಾದವ್‌ ಅವರ ಹೆಂಡತಿಯಾಗಿರುವ ಅಪರ್ಣಾ ಯಾದವ್‌, ಉತ್ತರಪ್ರದೇಶದ ಲಖನೌ ನಲ್ಲಿ ನಡೆದ ತಮ್ಮ ಸಹೋದರನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಂಜಯ್‌ ಬನ್ಸಾಲಿ  ನಿರ್ದೇಶನದ ಪದ್ಮಾವತಿಯ ಘೂಮರ್‌ ಹಾಡಿಗೆ ಸಹನರ್ತಕಿಯರೊಂದಿಗೆ ಅಪರ್ಣಾ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿಗದ್ದು, ಹಲವು ರಾಜ್ಯಗಳಲ್ಲಿ  ಪದ್ಮಾವತಿ ಬಿಡುಗಡೆಗೆ ನಿಷೇಧ ಹೇರಿರುವ ಬೆನ್ನಲ್ಲೇ ಸಮಾಜವಾದಿ ಪಾರ್ಟಿ ಮುಖಂಡರ ಸೊಸೆ ವಿವಾದಿತ ಚಿತ್ರದ ಹಾಡಿಗೆ ಡ್ಯಾನ್ಸ್‌ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ರಜಪೂತ ಭಾವನೆಗಳಿಗೆ ಬೆಲೆ ಕೊಡದ ಅಪರ್ಣಾ ಯಾದವ್: ಕರ್ಣಿ ಸೇನಾ ಆಕ್ರೋಶ
ಇನ್ನು ಪದ್ಮಾವತಿ ಸಿನಿಮಾಗೆ ಭಾರೀ ವಿರೋಧ ವ್ಯಕ್ತಪಡಿಸಿರುವ ರಜಪೂತ ಸಮುದಾಯದ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪದ್ಮಾವತಿ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದರೂ  ರಜಪೂತ ಭಾವನೆಗಳಿಗೆ ಬೆಲೆ ಕೊಡದೆ ಅಪರ್ಣಾ ಅವರು ಡ್ಯಾನ್ಸ್‌ ಮಾಡಿದ್ದಾರೆ. ಅವರಿಗೆ ಇಷ್ಟವಿದ್ದರೆ ನಾವು ನಿಜವಾದ ಘೂಮರ್‌ ಹಾಡು ಮತ್ತು ಜನಪದ ಹಾಡುಗಳನ್ನು ಕಳಿಸಿಕೊಡುತ್ತೇವೆ.. ಬೇಕಿದ್ದರೆ ಡ್ಯಾನ್ಸ್‌ ಮಾಡಲಿ ಎಂದು  ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.