ವರದಕ್ಷಿಣೆ ಕಿರುಕುಳ ಪ್ರಕರಣ: ತನಿಖೆಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಲು ಸಾದ್ಯವಿಲ್ಲ ಎಂದ ಸುಪ್ರೀಂ ಕೋರ್ಟ್
ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಹೇಗೆ ತನಿಖೆ ನಡೆಸಬೇಕೆನ್ನುವುದಕ್ಕೆ ಮಾರ್ಗದರ್ಶನ ಸೂತ್ರಗಳನ್ನು ನೀಡಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

Published On :
ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಹೇಗೆ ತನಿಖೆ ನಡೆಸಬೇಕೆನ್ನುವುದಕ್ಕೆ ಮಾರ್ಗದರ್ಶನ ಸೂತ್ರಗಳನ್ನು ನೀಡಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಜಸ್ಟೀಸ್ ಡಿ.ವೈ. ಚಂದ್ರಚೂಡ ಅವರುಗಳನ್ನೊಳಗೊಂಡ ಪೀಠ ಹೀಗೆಂದು ಅಭಿಪ್ರಾಯಪಟ್ಟಿದೆ ಇದಕ್ಕೂ ಮುನ್ನ ದ್ವಿ ಸದಸ್ಯ ಪೀಠವು ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಪೋಲೀಸರು ಕ್ರಮ ಕೈಗೊಳ್ಳುವ ಮುನ್ನ ನ್ಯಾಯಾಲಯವು ಅದರ ಪರಿಶೀಲನೆಗೆ ಸಮಿತಿ ರಚಿಸಬೇಕೆಂದು ಸೂಚಿಸಿತ್ತು.
ನ್ಯಾಯಾಧೀಶ ಎ.ಕೆ. ಗೋಯಲ್ ನೇತೃತ್ವದ ಪೀಠವು ವರದಕ್ಷಿಣೆ ಕಿರುಕುಳದ ದೂರುಗಳ ಬಗ್ಗೆ ತನಿಖೆ ನಡೆಸುವಾಗ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು ಎಂದಿದ್ದರು
ಹಿರಿಯ ವಕೀಲ ವಿ.ಶೇಖರ್ ಮತ್ತು ಇಂಡು ಮಲ್ಹೋತ್ರಾ- ಇಬ್ಬರು ಅಮಿಕಸ್ ಕ್ಯೂರಿ ಅವರ ಸಲಹೆಯಂತೆ, ನ್ಯಾಯಾಲಯದ ಮಾರ್ಗದರ್ಶನವನ್ನು ಪ್ರಕರಣದ ಸಂಬಂಧ ಪಟ್ಟವರು "ಒಪ್ಪಿಕೊಳ್ಳಬಹುದು ಅಥವಾ ತಳ್ಳಿಹಾಕಬಹುದು" ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣಗಳಲ್ಲಿ ಪೊಲೀಸರು ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಮಾರ್ಗದರ್ಶನಗಳನ್ನು ರೂಪಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು.. ಇದೀಗ ಸುಪ್ರೀಂ ಕೋರ್ಟ್, ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಶಾಸನ ಬದ್ದವಾದ ಕ್ರಮಗಳನ್ನು ಕೈಗೊಳ್ಳಉ (ಐಪಿಸಿ ಸೆಕ್ಷನ್ 498 ಎ ಜಾರಿಗೆ ತರಲು) ಮಾರ್ಗದರ್ಶಿ ಸೂತ್ರಗಳ ಅಗತ್ಯವಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂ ಕೋರ್ಟ್ವರದಕ್ಷಿಣೆ ಕಿರುಕುಳdowry harassmentguidelines on how to investigationChief Justice Dipak Misraತನಿಖಾ ಮಾರ್ಗದರ್ಶಿ ಸೂತ್ರಗಳುಮುಖ್ಯ ನ್ಯಾಯಮೂರ್ತಿ ದೀಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


