ದೇಶ

ಸ್ವಯಂ ಪ್ರಚಾರದಲ್ಲಿ ಮುಳುಗಿರುವ ಮೋದಿಗೆ ತಾವೊಬ್ಬ ಪ್ರಧಾನಿ ಎಂಬುದೇ ಮರೆತು ಹೋಗಿದೆ: ಚಿದಂಬರಂ

ತಮ್ಮ ಬಗ್ಗೆ ಪ್ರಚಾರ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿರುವ ನರೇಂದ್ರ ಮೋದಿಯವರಿಗೆ ತಾವೊಬ್ಬ ದೇಶದ ಪ್ರಧಾನಮಂತ್ರಿ ಎಂಬುದೇ ಮರೆತುಹೋಗಿದೆ ಎಂದು ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಕಿಡಿಕಾರಿದ್ದಾರೆ...

ಸ್ವಯಂ ಪ್ರಚಾರದಲ್ಲಿ ಮುಳುಗಿರುವ ಮೋದಿಗೆ ತಾವೊಬ್ಬ ಪ್ರಧಾನಿ ಎಂಬುದೇ ಮರೆತು ಹೋಗಿದೆ: ಚಿದಂಬರಂ
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
Published On :
ನವದೆಹಲಿ: ತಮ್ಮ ಬಗ್ಗೆ ಪ್ರಚಾರ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿರುವ ನರೇಂದ್ರ ಮೋದಿಯವರಿಗೆ ತಾವೊಬ್ಬ ದೇಶದ ಪ್ರಧಾನಮಂತ್ರಿ ಎಂಬುದೇ ಮರೆತುಹೋಗಿದೆ ಎಂದು ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಕಿಡಿಕಾರಿದ್ದಾರೆ. 
ಪ್ರತಿಷ್ಠೆಯ ಕಣವಾಗಿರುವ ಗುಜರಾಜ್ ವಿಧಾನಸಭಾ ಚುನಾವಣೆಯಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿ ಕೇಂದ್ರೀಕೃತ ಪ್ರಚಾರದಲ್ಲಿ ಬಿಜೆಪಿ ತೊಡಗಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಚಿದಂಬರಂ ಅವರು ವಾಗ್ದಾಳಿ ನಡೆಸಿದ್ದಾರೆ. 
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ಮೋದಿಯವರು ತಮ್ಮ ಹಾಗೂ ತಮ್ಮ ಹಳೆಯ ಜೀವನದ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರು ಗುಜರಾತ್ ಹಾಗೂ ಗುಜರಾತಿಗಳನ್ನು ನಿರ್ಲಕ್ಷಿಸಿದ್ದಾರೆ. ತಾವು ದೇಶದ ಪ್ರಧಾನಮಂತ್ರಿ ಎಂಬುದನ್ನೇ ಮರೆತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. 
ಗುಜರಾತ್ ರಾಜ್ಯ ಚುನಾವಣೆ ಎಂದರೆ ಕೇವಲ ಮೋದಿಯಲ್ಲ. ಇದು ಕೇಂದ್ರ ಬಿಜೆಪಿ ಸರ್ಕಾರದ ಕಳೆದ 42 ತಿಂಗಳುಗಳಲ್ಲಿ ಜನರಿಗೆ ಅಚ್ಚೇದಿನ್ ನೀಡಿದೆಯೇ ಎಂಬ ಪ್ರಶ್ನೆಯಾಗಿದೆ. ದೇಶದಲ್ಲಿರುವ ನಿರುದ್ಯೋಗ ಸಮಸ್ಯೆ, ಹೂಡಿಕೆಯಲ್ಲಿ ಇಳಿಕೆ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉದ್ಯಮದಲ್ಲಿ ಕುಸಿತ, ರಫ್ತು ಇಳಿಕೆ ಹಾಗೂ ದರ ಹೆಚ್ಚಳದ ಬಗ್ಗೆ ಮೋದಿಯವರೇಕೆ ಮಾಡುತ್ತಿಲ್ಲ ಎಂದಿದ್ದಾರೆ. 
ಮಹಾತ್ಮಾ ಗಾಂಧೀಜಿ ಭಾರತೀಯ ಹಾಗೂ ಗುಜರಾತ್ ಪುತ್ರ ಎಂಬುದನ್ನು ಮೋದಿಯವರು ಮರೆತಿದ್ದಾರೆ. ಜೊತೆಗೆ ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತೇವೆ. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅಸ್ತ್ರವಾಗಿ ಆಯ್ದುಕೊಂಡಿದ್ದರು ಎಂದು ಟ್ವೀಟ್ ಮಾಡಿದ್ದಾರೆ. 
ಪ್ರಧಾನಿ ಮೋದಿ ಹಾಗೂ ಬಿಜೆಪಿ ಇದೀಗ ಹತಾಶರಾಗಿ ಸರ್ದಾರ್ ಪಟೇಲ್ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಆದರೆ, ಅವರು ಆರ್'ಎಸ್ಎಸ್ ನ ವಿಭಜಕ ಸಿದ್ಧಾಂತವನ್ನು ವಿರೋಧಿಸಿದ್ದರು ಎಂದು ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.