ದೇಶ

ಒಂದೇ ದಿನದಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ, ಮುಂಬೈ ವಿಮಾನ ನಿಲ್ದಾಣದ ನೂತನ ದಾಖಲೆ

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊನ್ನೆ ಶುಕ್ರವಾರದಂದು ನೂತನ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.

ಒಂದೇ ದಿನದಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ, ಮುಂಬೈ ವಿಮಾನ ನಿಲ್ದಾಣದ ನೂತನ ದಾಖಲೆ
ಒಂದೇ ದಿನದಲ್ಲಿ 969 ವಿಮಾನಗಳ ಹಾರಾಟ ನಿರ್ವಹಣೆ, ಮುಂಬೈ ವಿಮಾನ ನಿಲ್ದಾಣದ ನೂತನ ದಾಖಲೆ
Published On :
ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೊನ್ನೆ ಶುಕ್ರವಾರದಂದು ನೂತನ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ವಿಮಾನ ನಿಲ್ದಾಣದಲ್ಲಿ ಒಂದೇ ದಿನಕ್ಕೆ ಒಂದೇ ರನ್ ವೇ ಮೂಲಕ 969  ವಿಮಾನಗಳ ಹಾರಾಟವನ್ನು ನಿರ್ವಹಿಸಿ ಹೊಸ ದಾಖಲೆ ಬರೆದಿದೆ 
ಇಲ್ಲಿ ಪ್ರತಿದಿನವೂ 900 ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸುತ್ತವೆ. ನಿಗದಿತ ವಿಮಾನಗಳೊಡನೆ ಖಾಸಗಿ ವಿಮಾನಗಳೂ ಇಲ್ಲಿ ಹಾರಾಟ ನಿರ್ವಹಣೆ ನಡೆಸುವ ಕಾರಣ ಜನದಟ್ಟಣೆ ಅಧಿಕವಾಗಿರುತ್ತದೆ. ಇದೇ ರೀತಿಯಲ್ಲಿ ಮೊನ್ನೆ ಶುಕ್ರವಾರ ಸಹ 969 ವಿಮಾನಗಳ ನಿರ್ವಹಣೆ ಮಾಡಲಾಗಿದೆ ಎಂದು ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.
ನ್ಯೂಯಾರ್ಕ್‌, ಲಂಡನ್‌, ದುಬೈ, ದೆಹಲಿಯಂತಹಾ ಬೃಅಹತ್ ನಗರಗಳಲ್ಲಿ ಎರಡಕ್ಕಿಂತ ಹೆಚ್ಚು ರನ್‌ ವೇಗಳು ಏಕಕಾಲಕ್ಕೆ ಬಳಕೆಯಲ್ಲಿರುತ್ತವೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ರನ್‌ ವೇಗಳನ್ನು ಇದ್ದರೂ ಸಹ, ಅವುಗಳು ಪರಸ್ಪರ ಸಂಧಿಸುವುದರಿಂದ ಒಮ್ಮೆಗೆ ಒಂದು ರನ್‌ ವೇ ಮಾತ್ರ ಬಳಸಲು ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.