ಬಲವಂತದ ಮತಾಂತರ ಮಾಡಿಕೊಂಡಿಲ್ಲ, ನನ್ನ ಪತಿಯೊಂದಿಗೆ ಇರಲು ಬಿಡಿ: ಹಾದಿಯಾ
ನಾನು ಬಲವಂತವಾಗಿ ಮತಾಂತರ ಹೊಂದಲ್ಲ... ನನ್ನದು ಲವ್ ಜಿಹಾದ್ ಅಲ್ಲ... ಪತಿಯೊಂದಿಗೆ ನನ್ನನ್ನು ಬದುಕಲು ಬಿಡಿ ಎಂದು ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ...

Published On :
ಕೊಟ್ಟಾಯಂ: ನಾನು ಬಲವಂತವಾಗಿ ಮತಾಂತರ ಹೊಂದಲ್ಲ... ನನ್ನದು ಲವ್ ಜಿಹಾದ್ ಅಲ್ಲ... ಪತಿಯೊಂದಿಗೆ ನನ್ನನ್ನು ಬದುಕಲು ಬಿಡಿ ಎಂದು ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಕೇಂದ್ರ ಬಿಂದುವಾಗಿರುವ ಯುವತಿ ಹಾದಿಯಾ ಹೇಳಿಕೊಂಡಿದ್ದಾಳೆ.
ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ.27 ರಂದು ಸುಪ್ರೀಂಕೋರ್ಟಿಗೆ ಹಾದಿಯಾ ಹಾಜರಾಗಬೇಕಿದೆ. ನ್ಯಾಯಾಲಯ ಹಾಜರಾಗುವ ಹಿನ್ನಲೆಯಲ್ಲಿ ದೆಹಲಿಗೆ ಹೊರಟಿರು ಹಾದಿಯಾ ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೂಲತಃ ಹಿಂದೂ ಧರ್ಮೀಯಳಾದ ಅಖಿಲಾ ಅಲಿಯಾಸ್ ಹಾದಿಯಾ... ನಾನು ಮುಸ್ಲಿಂ. ನಾನು ಬಲವಂತದ ಮತಾಂತರವಾಗಿಲ್ಲ. ನಾನು ನನ್ನ ಪತಿಯ ಜೊತೆಗೆ ಇರಬೇಕೆಂದು ಬಯಸುವೆ ಎಂದು ಹಿಜಾಬ್ ಧರಿಸಿದ್ದ ಹಾದಿಯಾ ಹೇಳಿದ್ದಾಳೆ.
ಹಾದಿಯಾ ಹೇಳಿಕೆ ನೀಡುತ್ತಿದ್ದಂತೆಯೇ ಪೊಲೀಸರು ಹಾಗೂ ಪೋಷಕರು ಆಕೆಯನ್ನು ಕೈಹಿಡಿದು ಎಳೆದುಕೊಂಡು ಹೋಗಿದ್ದಾರೆ.
ಹಾದಿಯಾ ಪ್ರಕರಣ ನಿಜಕ್ಕೂ ಲವ್ ಜಿಹಾದ್ ಪ್ರಕರಣವೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ತನ್ನ ಮುಂದೆ ನ.27 ರಂದು ಖುದ್ದು ಹಾಜರಾಗಬೇಕೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಪೀಠ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಸೋಮವಾರ ಹಾದಿಯಾ ಕುಟುಂಬ ನ್ಯಾಯಾಲಯಕ್ಕೆ ಹಾಜರಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


