ಒಡಿಶಾ: 100 ರು. ಕೊಟ್ಟು ತನ್ನ ವಿದ್ಯಾರ್ಥಿಗಳನ್ನು ಹೊಲದಲ್ಲಿ ದುಡಿಸಿಕೊಂಡ ಸರ್ಕಾರಿ ಶಿಕ್ಷಕಿ
ಒಡಿಶಾದ ಮಯೂರ್ ಭಂಜ್ ನ ಸರ್ಕಾರಿ ಶಾಲೆಯ ಮಕ್ಕಳನ್ನು ಶಿಕ್ಷಕಿಯೊಬ್ಬರು ತನ್ನ ಹೊಲದಲ್ಲಿ ಅಕ್ರಮವಾಗಿ...

Published On :
ಮಯೂರ್‌ಭಂಜ್: ಒಡಿಶಾದ ಮಯೂರ್ ಭಂಜ್ ನ ಸರ್ಕಾರಿ ಶಾಲೆಯ ಮಕ್ಕಳನ್ನು ಶಿಕ್ಷಕಿಯೊಬ್ಬರು ತನ್ನ ಹೊಲದಲ್ಲಿ ಅಕ್ರಮವಾಗಿ ದುಡಿಸಿಕೊಂಡಿರುವ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಸಂಗೀತ ಸರಿತಾ ಮುಂಡಾ ಎಂಬ ಶಿಕ್ಷಕಿ ಮೂವರು ವಿದ್ಯಾರ್ಥಿನಿಯರನ್ನು ಮೂರುದಿನಗಳ ಕಾಲ ತಮ್ಮ ಜಮೀನಿನಲ್ಲಿ ದುಡಿಸಿಕೊಂಡಿದ್ದು, ದಿನಕ್ಕೆ ತಲಾ 100 ರುಪಾಯಿಯಂತೆ ಮೂವರಿಗೂ ಕೂಲಿ ನೀಡಿದ್ದಾರೆ ಎಂದು ಆರೋಪಿಸಿಲಾಗಿದೆ.
ಈ ಮೂವರು ವಿದ್ಯಾರ್ಥಿನಿಯರು ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ಅವರು ಶಾಲೆಯಲ್ಲೇ ಉಳಿದುಕೊಳ್ಳುತ್ತಿದ್ದರು. ವಿದ್ಯಾರ್ಥಿನಿಯರನ್ನು ನೋಡಲು ಅವರ ಪೋಷಕರು ಬಂದಿದ್ದಾಗ ವಿದ್ಯಾರ್ಥಿನಿಯರು ಇಲ್ಲದಿರುವುದು ಗೊತ್ತಾಗಿದೆ. ವಿಚಾರಿಸಿದ ಬಳಿಕ ವಾಸ್ತವ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಪೋಷಕರು ಶಾಲೆಗೆ ಬಿಗ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಈ ಕುರಿತು ಉನ್ನತಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


