ಮುಂಬೈ: ಅತ್ಯಾಚಾರ ಪ್ರಕರಣ, ಖ್ಯಾತ ಟಿವಿ ನಟ ಪಿಯೂಷ್ ಸಹದೇವ್ ಬಂಧನ
ಅತ್ಯಾಚಾರ ಆರೋಪದಡಿಯಲ್ಲಿ ಖ್ಯಾತ ಹಿಂದಿ ಟಿವಿ ನಟ ಪಿಯೂಷ್ ಸಹದೇವ್ ಬಂಧನವಾಗಿದೆ.

Published On :
ಮುಂಬೈ: ಅತ್ಯಾಚಾರ ಆರೋಪದಡಿಯಲ್ಲಿ ಖ್ಯಾತ ಹಿಂದಿ ಟಿವಿ ನಟ ಪಿಯೂಷ್ ಸಹದೇವ್ ಬಂಧನವಾಗಿದೆ. ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದ್ದು ಇದೀಗ ಪೋಲೀಸರ ವಶದಲ್ಲಿದ್ದಾರೆಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಕಿರಣ್ ಕಲೇ ತಿಳಿಸಿದ್ದಾರೆ.
ಮುಂಬೈ ವರ್ಸೋವಾ ಪೊಲೀಸರು ಹೇಳಿದಂತೆ ನ.20 ರಂದು ಪಿಯೂಷ್ ವಿರುದ್ಧ ಯುವತಿಯೊಬ್ಬರು ದೂರು ನೀಡಿದ್ದರು.
ಕೆಲ ತಿಂಗಳ ಹಿಂದಷ್ಟೇ ಪಿಯೂಷ್ ತನಗೆ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದರು. ಫ್ಯಾಷನ್ ಕ್ಷೇತ್ರದಲ್ಲಿ, ಟಿವಿ ಉದ್ಯಮದಲ್ಲಿ ಅವಕಾಶ ಕೊಡಿಸುತ್ತೇನೆಂದು ತನನ್ನು ನಂಬಿಸಿದ್ದರು ಎಂದಿರುವ ಯುವತಿ ದಿನದಿನಕ್ಕೆ ನಮ್ಮಿಬ್ಬರ ನಡುವೆ ಪರಿಚಯ ಹೆಚ್ಚಾಗಿ ಈ ಎರಡು ತಿಂಗಳಿನಿಂದ ಒತ್ಟಾಗಿದ್ದೆವು. ಆದರೆ ಅವರಿಗೆ ಬೇರೆಯವರೊಡನೆ ಸಂಬಂಧವಿತ್ತು. ಇದನ್ನು ನಾನು ಅವರಲ್ಲಿ ಪ್ರಶ್ನಿಸಿದಾಗ ಅವ್ರು ನನ್ನಿಂದ ದೂರ ಸರಿದರು ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ನ.22 ರಂದು ನಟನನ್ನು ಬಂಧಿಸಿದ ಪೋಲೀಸರು ನ.27ರ ತನಕ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ.
ಹಿಂದಿ ಧಾರಾವಾಹಿಗಳಾದ ದೇವೋಂಕಿ ದೇವ ಮಹದೇವ್, ಸಪ್ನೆ ಸುಹಾನೆ ಲಡಕ್‌ಪಾನ್ ಕೆ, ಗೀತ್ ಹಾಗು ಹರ್ ಘರ್ ಕುಚ್ ಕೆಹ್ತಾ ಹೈಮೊದಲಾದ ಧಾರಾವಾಹಿಗಳಲ್ಲಿ ನಟಿಸಿರುವ ಪಿಯೂಷ್ ತಮ್ಮ ಪಾತ್ರಗಳಿಂದ ಮನೆ ಮನೆಯ ಜನರ ಮನ ಗೆದ್ದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


