ದೇಶ

ಸಂಸತ್ ಚಳಿಗಾಲ ಅಧಿವೇಶನ ದಿನಾಂಕ ಘೋಷಣೆ ಕೇವಲ ಔಪಚಾರಿಕವಷ್ಟೇ: ಮಲ್ಲಿಕಾರ್ಜುನ ಖರ್ಗೆ

ಸಂಸತ್ ಚಳಿಗಾಲ ಅಧಿವೇಶನ ದಿನಾಂಕವನ್ನು ಕೇಂದ್ರ ಸರ್ಕಾರ ಕೇವಲ ಔಪಚಾರಿಕಕ್ಕಷ್ಟೇ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ಹೇಳಿದ್ದಾರೆ...

ಸಂಸತ್ ಚಳಿಗಾಲ ಅಧಿವೇಶನ ದಿನಾಂಕ ಘೋಷಣೆ ಕೇವಲ ಔಪಚಾರಿಕವಷ್ಟೇ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
Published On :
ನವದೆಹಲಿ: ಸಂಸತ್ ಚಳಿಗಾಲ ಅಧಿವೇಶನ ದಿನಾಂಕವನ್ನು ಕೇಂದ್ರ ಸರ್ಕಾರ ಕೇವಲ ಔಪಚಾರಿಕಕ್ಕಷ್ಟೇ ಘೋಷಣೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಶುಕ್ರವಾರ ಹೇಳಿದ್ದಾರೆ. 
ಈ ಕುರಿತಂತೆ ಮಾತನಾಡಿರುವ ಅವರು, ಚಳಿಗಾಲ ಅಧಿವೇಶನದ ದಿನಾಂಕ ಘೋಷಣೆ ಕೇವಲ ಔಪಚಾರಿಕವಷ್ಟೇ. ಸಂಸತ್ತು ಶಾಂತಿಯುತವಾಗಿ ಕಾರ್ಯನಿರ್ವಹಿಸುವುದು ಅವರಿಗೆ ಬೇಕಿಲ್ಲ., ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತ ಚರ್ಚೆ ಅವರಿಗೆ ಬೇಕಿಲ್ಲ ಎಂದು ಆಡಳಿತರೂಢ ಎನ್'ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 
ಈ ಬಾರಿಯ ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್ ಸರಕು ಮತ್ತು ಸೇವಾ ತೆರಿಗೆ, ನೋಟು ನಿಷೇಧ, ಭಯೋತ್ಪಾದನೆ ಹಾಗೂ ಹಫೀಜ್ ಸಯೀದ್ ಕುರಿತ ವಿಚಾರಗಳ ಕುರಿತಂತೆ ಧ್ವನಿಯೆತ್ತುತ್ತದೆ ಎಂದು ತಿಳಿಸಿದ್ದಾರೆ. 
ಡಿಸೆಂಬರೇ 5 ರಿಂದ ಜನವರಿ 5 ರ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಮಿತಿ ಘೋಷಣೆ ಮಾಡಿದ್ದು, 14 ದಿನಗಳ ಕಾಲ ಸಂಸತ್ ಅಧಿವೇಶನ ನಡೆಯಲಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.