ದೇಶ

ಗುಜರಾತ್ ಸಿಎಂ ತಿರಸ್ಕರಿಸಿದ ದಲಿತ ಸಮುದಾಯದ ರಾಷ್ಟ್ರಧ್ವಜ ಸ್ವೀಕರಿಸಲು ರಾಹುಲ್ ಮುಂದು

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಿರಸ್ಕರಿಸಿದ ದಲಿತರು ನಿರ್ಮಿಸಿದ ಅತಿ ದೊಡ್ಡ ರಾಷ್ಟ್ರಧ್ವಜವನ್ನು...

ಗುಜರಾತ್ ಸಿಎಂ ತಿರಸ್ಕರಿಸಿದ ದಲಿತ ಸಮುದಾಯದ ರಾಷ್ಟ್ರಧ್ವಜ ಸ್ವೀಕರಿಸಲು ರಾಹುಲ್ ಮುಂದು
ರಾಹುಲ್ ಗಾಂಧಿ
Published On :
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಿರಸ್ಕರಿಸಿದ ದಲಿತರು ನಿರ್ಮಿಸಿದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವೀಕರಿಸಲು ಸಿದ್ಧವಾಗಿದ್ದಾರೆ.
ರಾಹುಲ್ ಗಾಂಧಿ ಅವರು ಗುರುವಾರ ಸನಂದ್ ಸಮೀಪದ ದಲಿತ ಶಕ್ತಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದು, ಈ ವೇಳೆ ದಲಿತರು ನಿರ್ಮಿಸಿದ 125 ಅಡಿ ಉದ್ದದ ಹಾಗೂ 83.3 ಅಡಿ ಎತ್ತರದ ರಾಷ್ಟ್ರ ಧ್ವಜವನ್ನು ಸ್ವೀಕರಿಸಲಿದ್ದಾರೆ.
ಅಸ್ಪೃಶ್ಯತೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಮನವಿಯೊಂದಿಗೆ ದಲಿತರು ನಿರ್ಮಿಸಿದ ಭಾರತದ ಅತಿ ದೊಡ್ಡ ರಾಷ್ಟ್ರಧ್ವಜವನ್ನು ವಿಜಯ್ ರೂಪಾನಿಗೆ ನೀಡಬೇಕಾಗಿತ್ತು. ಆದರೆ ದಲಿತ ಮುಖಂಡರು ಅದನ್ನು ಗುಜರಾತ್ ಸಿಎಂಗೆ ತಲುಪಿಸುವಂತೆ ಗಾಂಧಿನಗರ ಜಿಲಾಧಿಕಾರಿಗೆ ನೀಡಲು ಹೋದಾಗ, ಅಷ್ಟು ದೊಡ್ಡ ಧ್ವಜವನ್ನು ಇಟ್ಟಕೊಳ್ಳಲು ನಮ್ಮ ಬಳಿ ಜಾಗ ಇಲ್ಲ. ಜಾಗ ಸಿಕ್ಕಾಗ ಹೇಳುತ್ತೇವೆ ಹಾಗ ತಂದು ಕೊಡಿ ಎಂದು ಹೇಳಿರುವುದಾಗಿ ದಲಿತ ನಾಯಕ ಮಾರ್ಟಿನ್ ಮ್ಯಾಕ್ವಾನ್ ಅವರು ಆರೋಪಿಸಿದ್ದಾರೆ.
10 ರಾಜ್ಯಗಳ ದಲಿತರು ಸೇರಿ ನಿರ್ಮಿಸಿದ ರಾಷ್ಟ್ರ ಧ್ವಜಕ್ಕೆ ಅಧಿಕಾರಿಗಳು ಮತ್ತು ಸಿಎಂ ಅವಮಾನ ಮಾಡಿದ್ದಾರೆ ಮ್ಯಾಕ್ವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾದಿ ಬಟ್ಟೆಯಲ್ಲಿ ಈ ರಾಷ್ಟ್ರಧ್ವಜ ನಿರ್ಮಿಸಲಾಗಿದ್ದು, ಇದಕ್ಕಾಗಿ 100 ದಲಿತ ಶಕ್ತಿ ಕೇಂದ್ರದ ವಿದ್ಯಾರ್ಥಿಗಳು 25 ದಿನ ಕೆಲಸ ಮಾಡಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೆಡ್ಕರ್ ಅವರ 125ನೇ ಜನ್ಮ ದಿನದ ಅಂಗವಾಗಿ 125 ಅಡಿ ಉದ್ದದ ರಾಷ್ಟ್ರಧ್ವಜ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.