ದೇಶ

ಭಾರತದ ಮೊದಲ ವೃತ್ತಿನಿರತ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಗೂಗಲ್ ಡೂಡಲ್ ಗೌರವ

ಬಾಲ್ಯವಿವಾಹ ನಿಗ್ರಹವೂ ಸೇರಿದಂತೆ ಭಾರತದ ಹಲವು ಸಾಮಾಜಿಕ ಕ್ರಾಂತಿಗಳಿಗೆ ನಾಂದಿ ಹಾಡಿದ ಮತ್ತು ಭಾರತದ ಮೊದಲ ವೃತ್ತಿನಿರತ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಮೂಲಕ ಗೌರವ ಸೂಚಿಸಿದೆ.

ಭಾರತದ ಮೊದಲ ವೃತ್ತಿನಿರತ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಗೂಗಲ್ ಡೂಡಲ್ ಗೌರವ
ಸಂಗ್ರಹ ಚಿತ್ರ
Published On :
ನವದೆಹಲಿ: ಬಾಲ್ಯವಿವಾಹ ನಿಗ್ರಹವೂ ಸೇರಿದಂತೆ ಭಾರತದ ಹಲವು ಸಾಮಾಜಿಕ ಕ್ರಾಂತಿಗಳಿಗೆ ನಾಂದಿ ಹಾಡಿದ ಮತ್ತು ಭಾರತದ ಮೊದಲ ವೃತ್ತಿನಿರತ ಮಹಿಳಾ ವೈದ್ಯೆ ರುಕ್ಮಾಬಾಯಿಗೆ ಖ್ಯಾತ ಸರ್ಚ್ ಎಂಜಿನ್ ಗೂಗಲ್  ಡೂಡಲ್ ಮೂಲಕ ಗೌರವ ಸೂಚಿಸಿದೆ.
ಇಂದು ಅಂದರೆ ನವೆಂಬರ್ 22ರಂದು ಅವರ 153ನೇ ಜನ್ಮದಿನವಾಗಿದ್ದು, ಅವರ ಸಾಧನೆಗಳನ್ನು ಗೂಗಲ್ ನೆನಪಿಸಿಕೊಂಡಿದೆ. ಭಾರತದ ಮೊದಲ ಮಹಿಳಾ ವೈದ್ಯೆ ಆನಂದಬಾಯಿ ಜೋಶಿಯಾದರೆ ಮೊದಲ ವೃತ್ತಿನಿರತ ಮಹಿಳಾ  ವೈದ್ಯೆ ರುಕ್ಮಾಬಾಯಿಯಾಗಿದ್ದಾರೆ. 
1864 ನವೆಂಬರ್ 22ರಂದು ಮುಂಬೈಯಲ್ಲಿ ಜನಿಸಿದ ರುಕ್ಮಾಬಾಯಿ ಅವರು, 1886ರಲ್ಲಿ ವೈದ್ಯಕೀಯ ಪದವಿ ಪಡೆದ ಅವರು, 1889 ರಲ್ಲಿ ವೈದ್ಯಕೀಯ ಉನ್ನತ ವ್ಯಾಸಂಗಕ್ಕೆ ಸೇರಿದರು. 1894ರಲ್ಲಿ ಅವರು ಉನ್ನತ ವೈದ್ಯಕೀಯ  ಪದವಿ ಪಡೆದರು. ರುಕ್ಮಾಬಾಯಿ ಅವರು ಸುಮಾರು 50 ವರ್ಷಕ್ಕೂ ಅಧಿಕ ಕಾಲ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದರಾದರೂ ಈ ಬಗ್ಗೆ ದಾಖಲೆಗಳು ಲಭ್ಯವಾಗಿರಲಿಲ್ಲ. ರುಕ್ಮಾಬಾಯಿ ಅವರ ತಾಯಿಯ ವಿವಾಹವಾದಾಗ ತಾಯಿಗೆ  14ವರ್ಷ, ರುಕ್ಮಾಬಾಯಿ ಅವರು ಜನಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ರುಕ್ಮಾಬಾಯಿ ಎರಡು ವರ್ಷವಿರುವಾಗಲೇ ತಾಯಿ ವಿಧವೆಯಾದರು.
ಅಂದಿನ ಕಾಲಕ್ಕೆ ಸಮಾಜಕ್ಕೆ ದೊಡ್ಡ ಪಿಡುಗಾಗಿದ್ದ ಬಾಲ್ಯವಿವಾಹ ಪದ್ಧತಿ ನಿರ್ನಾಮಕ್ಕೆ ರುಕ್ಮಾಬಾಯಿ ಸಾಕಷ್ಟು ಶ್ರಮಿಸಿದ್ದರು. ತಾವು ಕಂಡ ಕಷ್ಟಗಳನ್ನು ಬೇರೆ ಹೆಣ್ಣು ಮಕ್ಕಳು ಅನುಭವಿಸಬಾರದು ಎಂದು ಬಾಲ್ಯ ವಿವಾಹ  ಪದ್ಧತಿಯನ್ನು ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣವನ್ನು ಹೆಚ್ಚುಹೆಚ್ಚಾಗಿ ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು ಎಂದು ಸಮಾಜಕ್ಕೆ ಕೂಗಿ ಹೇಳಿದ್ದರು. ಆ ಮೂಲಕ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿ ಕುರಿತು ಭಿನ್ನ  ಅಭಿಪ್ರಾಯಗಳು ಮೂಡಿಸುವಲ್ಲಿ ರುಕ್ಮಾಬಾಯಿ ಯಶಸ್ವಿಯಾಗಿದ್ದರು. ಸೆಪ್ಟೆಂಬರ್ 25 1955ರಂದು ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.