ದೇಶ

'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು: ದೀಪಿಕಾ ಬೆನ್ನಿಗೆ ನಿಂತ ನಟ ಕಮಲ್ ಹಾಸನ್

ಪದ್ಮಾವತಿ ಚಿತ್ರ ವಿವಾದ ಸಂಬಂಧ ಚಿತ್ರ ತಂಡ ಹಾಗೂ ನಟಿ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್, 'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು ಎಂದು ಹೇಳಿದ್ದಾರೆ.

'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು: ದೀಪಿಕಾ ಬೆನ್ನಿಗೆ ನಿಂತ ನಟ ಕಮಲ್ ಹಾಸನ್
ಸಂಗ್ರಹ ಚಿತ್ರ
Published On :
ಚೆನ್ನೈ: ಪದ್ಮಾವತಿ ಚಿತ್ರ ವಿವಾದ ಸಂಬಂಧ ಚಿತ್ರ ತಂಡ ಹಾಗೂ ನಟಿ ದೀಪಿಕಾ ಪಡುಕೋಣೆ ಬೆಂಬಲಕ್ಕೆ ನಿಂತಿರುವ ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್, 'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು ಎಂದು ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಮಲ್, ಸ್ವತಂತ್ರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಳ್ಳಿಹಾಕುವಂತಿಲ್ಲ.. 'ಪದ್ಮಾವತಿ' ತಲೆಯ ರಕ್ಷಣೆಯಾಗಬೇಕು..ಎಂದು ನಚ ಕಮಲ್ ಟ್ವೀಟ್ ಮಾಡಿದ್ದಾರೆ. ಅಂತೆಯೇ ತಮ್ಮ  ವಿಶ್ವರೂಪಂ ಹಾಗೂ ದಶಾವತಾರಂ ಚಿತ್ರಗಳ ವಿವಾದ ಸಂಬಂಧ ಪರೋಕ್ಷವಾಗಿ ಸಮುದಾಯಗಳ ವಿರುದ್ಧ ಕಿಡಿಕಾರಿರುವ ನಟ ಕಮಲ್, ನನ್ನ ಹಲವು ಚಿತ್ರಗಳ ವಿರುದ್ಧ ಹಲವು ಸಮುದಾಯಗಳು ಈ ಹಿಂದೆ ವಿರೋಧ  ವ್ಯಕ್ತಪಡಿಸಿದ್ದವು. ಯಾವುದೇ ಚರ್ಚೆಯಲ್ಲೂ ಅತಿರೇಕತೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಭಾರತೀಯ ಸಿನಿಮಾ ರಂಗದ ದಿಗ್ಗಜ ನಟರ ವಿರುದ್ಧ ಕಿಡಿಕಾರಿದ ನಟ ಕಮಲ್ ಹಾಸನ್, ಕನಿಷ್ಠ ಪಕ್ಷ ಈಗಾಲಾದರೂ ಭಾರತದ ಸೆಲೆಬ್ರಿಟಿಗಳು ಎಚ್ಚೆತ್ತುಕೊಳ್ಳಬೇಕು. ಚಿಂತನೆಗೆ ಇದು ಸರಿಯಾದ ಸಮಯ, ನಾವು  ಹೇಳಿದ್ದೆಲ್ಲಾ ಮುಗಿಯಿತು..ಈಗ ನೀವೆ ಮತ್ತೊಮ್ಮೊ ಆಲೋಚಿಸಿ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.