ದೇಶ

ಹಂದ್ವಾರ ಎನ್ ಕೌಂಟರ್: 3 ಎಲ್ ಇಟಿ ಉಗ್ರರ ಹತ್ಯೆ, ವಾಯುಸೇನೆ ಅಧಿಕಾರಿ ಹುತಾತ್ಮ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಮಂಗಳವಾರ ಕಾಶ್ಮೀರದ ಹಂದ್ವಾರದಲ್ಲಿ ಮೂವರು ಲಷ್ಕರ್ ಉಗ್ರರನ್ನು ಸೇನೆ ಹೊಡೆದುರುಳಿಸಿದೆ.

ಹಂದ್ವಾರ ಎನ್ ಕೌಂಟರ್: 3 ಎಲ್ ಇಟಿ ಉಗ್ರರ ಹತ್ಯೆ, ವಾಯುಸೇನೆ ಅಧಿಕಾರಿ ಹುತಾತ್ಮ
ಸಂಗ್ರಹ ಚಿತ್ರ
Published On :
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಮಂಗಳವಾರ ಕಾಶ್ಮೀರದ ಹಂದ್ವಾರದಲ್ಲಿ ಮೂವರು ಲಷ್ಕರ್ ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಸೇನಾ ಮೂಲಗಳ ಪ್ರಕಾರ ಮೃತ ಉಗ್ರರೆಲ್ಲರೂ ಪಾಕಿಸ್ತಾನ ಮೂಲದವರಾಗಿದ್ದು, ಸೇನಾ ಕಾರ್ಯಾಚರಣೆ ವೇಳೆ ಐಎಎಫ್ ನ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ. ಹುತಾತ್ಮ ಯೋಧರನ್ನು  ಐಎಎಫ್ ನ ಗರುಡಾ ಸಿಬ್ಬಂದಿ ಎಂದು ಹೇಳಲಾಗಿದೆ.
ಸೈನಿಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಸೇನಾ ಮೂಲಗಳು ತಿಳಿಸಿರುವಂತೆ ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿತ್ತು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಶಸ್ತ್ರ ಸಜ್ಜಿತ ಉಗ್ರರನ್ನು ಸಿದ್ಧ  ಪಡಿಸಿ ದಾಳಿಗೆ ಮುಂದಾಗಿತ್ತು. ಆದರೆ ಭಾರತೀಯ ಸೈನಿಕರ ಸಮಯ ಪ್ರಜ್ಞೆಯಿಂದಾಗಿ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಡೆದಂತಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಕಾಶ್ಮೀರದ ಡಿಜಿಪಿ ಎಸ್ ಪಿ ವಾಲಿದ್ ಅವರು  ಮಾಹಿತಿ ನೀಡಿದ್ದು, ಹಂದ್ವಾರದ ಮಾಗನ್ ಪ್ರದೇಶದಲ್ಲಿ ಅವಿತಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.