ದೇಶ

ಕಾಶ್ಮೀರ ಕಣಿವೆಯಲ್ಲಿ ಎಲ್ಇಟಿ ಉನ್ನತ ನಾಯಕತ್ವವನ್ನು ಸದೆಬಡಿಯಲಾಗಿದೆ: ಭಾರತೀಯ ಸೇನೆ

ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉನ್ನತ ನಾಯಕತ್ವವನ್ನು ನಾಶ ಮಾಡಲಾಗಿದೆ ಎಂದು ಭಾರತೀಯ ಸೇನೆ...

ಕಾಶ್ಮೀರ ಕಣಿವೆಯಲ್ಲಿ ಎಲ್ಇಟಿ ಉನ್ನತ ನಾಯಕತ್ವವನ್ನು ಸದೆಬಡಿಯಲಾಗಿದೆ: ಭಾರತೀಯ ಸೇನೆ
ಭಾರತೀಯ ಸೇನೆ
Published On :
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಉನ್ನತ ನಾಯಕತ್ವವನ್ನು ನಾಶ ಮಾಡಲಾಗಿದೆ ಎಂದು ಭಾರತೀಯ ಸೇನೆ ಅಧಿಕಾರಿಗಳು ತಿಳಿಸಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಭಾರತೀಯ ಸೇನೆ ಯೋಧರು ಹಾಗೂ ಭಯೋತ್ಪಾದಕರ ನಡುವಿನ ಗುಂಡಿನ ದಾಳಿಯಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ 6 ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಲೆಫ್ಟಿನೆಂಟ್ ಜನರಲ್ ಜೆಎಸ್ ಸಂಧು ಅವರು ಆರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಎಲ್ಇಟಿಯ ಉನ್ನತ ನಾಯಕತ್ವನ್ನು ನಾಶ ಮಾಡಲಾಗಿದೆ ಎಂದರು. 
ಮೃತ ಉಗ್ರರ ಪೈಕಿ ಒಸ್ಮಾನ್ ಜುಂಗ್ವಿ ಅಥವಾ ಒವೈದ್ ಓರ್ವನಾಗಿದ್ದು ಆತ ಝಾಕಿ ಉರ್ ರೆಹಮಾನ್ ಲಖ್ವಿ ಸೋದರಳಿಯ. ಬಹುಷಃ ಝಾಕಿಯೂರ್ ರೆಹಮಾನ್ ಮಕ್ಕಿ ಪುತ್ರನಿರಬೇಕು. ಇನ್ನಿಬ್ಬರು ಎಲ್ಇಟಿಯ ಟಾಪ್ ಕಮಾಂಡರ್ಸ್ ಝರ್ಗಾರ್ ಮತ್ತು ಮೆಹಮೂದ್ ಎಂದು ಸಂಧು ಅವರು ತಿಳಿಸಿದ್ದಾರೆ. 
ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ ಮತ್ತು ಕಣಿವೆ ರಾಜ್ಯದಲ್ಲಿ ಶಾಂತಿಯನ್ನು ಶೀಘ್ರದಲ್ಲೇ ಪುನಃ ಸ್ಥಾಪಿಸಲು ಎದುರು ನೋಡುತ್ತಿದ್ದೇವೆ ಎಂದು ಸಂಧು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.