ದೇಶ

ಸೆಕ್ಸ್ ಸಿಡಿ ವಿವಾದ: ನಾನು ಕೂಡ ಬಿಜೆಪಿ ನಾಯಕರ ಸಿಡಿಗಳನ್ನು ಬಿಡುಗಡೆ ಮಾಡಬಹುದು-ಹಾರ್ದಿಕ್ ಪಟೇಲ್

ಸೆಕ್ಸ್ ಸಿಡಿ ವಿವಾದ ಕುರಿತಂತೆ ಬಿಜೆಪಿ ವಿರುದ್ಧ ಪಟೇದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ...

ಸೆಕ್ಸ್ ಸಿಡಿ ವಿವಾದ: ನಾನು ಕೂಡ ಬಿಜೆಪಿ ನಾಯಕರ ಸಿಡಿಗಳನ್ನು ಬಿಡುಗಡೆ ಮಾಡಬಹುದು-ಹಾರ್ದಿಕ್ ಪಟೇಲ್
ಹಾರ್ದಿಕ್ ಪಟೇಲ್
Published On :
ಗಾಂಧಿನಗರ: ಸೆಕ್ಸ್ ಸಿಡಿ ವಿವಾದ ಕುರಿತಂತೆ ಬಿಜೆಪಿ ವಿರುದ್ಧ ಪಟೇದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. 
ಮಾನ್ಸದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಿರುವ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಖಚಿತ. ಒಂದು ವೇಳೆ ಬಿಜೆಪಿ ಗೆದ್ದಿದ್ದೇ ಆದರೆ, ಅದು 6.5 ಕೋಟಿ ಗುಜರಾತಿಗರ ಸೋಲಾಗಲಿದೆ. ಮುಂಬರುವ ಚುನಾವಣೆಯಲ್ಲಿ 60 ಸೀಟುಗಳನ್ನೂ ಕೂಡ ಪಡೆಯುವುದಿಲ್ಲ ಎಂದು ಹೇಳಿದ್ದಾರೆ. 
ನನ್ನ ವಿರುದ್ದ ತಿರುಚಿದ ಸೆಕ್ಸ್ ಸಿಡಿಯನ್ನು ಸೃಷ್ಟಿಸಲು ಬಿಜೆಪಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದೆ. ನಾನು ಅಂದುಕೊಂಡರೆ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ರುತ್ವಿಕ್ ಪಟೇಲ್ ಸೇರಿದಂತೆ ಬಿಜೆಪಿ ನಾಯಕರ ತಿರುಚಿದ ಸಿಡಿಗಳನ್ನು ಬಿಡುಗಡೆ ಮಾಡಬಹುದು. ಗುಜರಾತ್ ಜನತೆ ಇಂತಹ ಸಿಡಿಗಳನ್ನಲ್ಲ, ರಾಜ್ಯ ಅಭಿವೃದ್ಧಿ ಕುರಿತ ವಿಡಿಯೋಗಳನ್ನು ಬಯಸುತ್ತಿದ್ದಾರೆಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿಯವರು ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿರುವುದರ ಕುರಿತು ಬಿಜೆಪಿ ನಾಯಕರು ಟೀಕಾಪ್ರಹಾರ ನಡೆಸುತ್ತಿದ್ದಾರೆ. ಆದರೆ, ಗುಜರಾತ್ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಭೇಟಿ ನೀಡಿದ್ದರು. ಅದಕ್ಕೆ ಏನು ಹೇಳುತ್ತಾರೆಂದು ಪ್ರಶ್ನಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.