ದೇಶ

ಇನ್ನೆಷ್ಟು ಪಾಕಿಸ್ತಾನ ನಿರ್ಮಿಸುತ್ತೀರಿ.. ದೇಶವನ್ನು ಇನ್ನೆಷ್ಟು ಭಾಗ ಮಾಡುತ್ತೀರೀ?: ಫಾರೂಕ್ ಅಬ್ದುಲ್ಲಾ

ಈಗಾಗಲೇ ಒಂದು ಪಾಕಿಸ್ತಾನ ಇದೆ... ಇನ್ನೂ ಅದೆಷ್ಟು ಪಾಕಿಸ್ತಾನಗಳನ್ನು ನಿರ್ಮಿಸುತ್ತೀರಿ..ದೇಶವನ್ನು ಇನ್ನೆಷ್ಟು ಭಾಗಗಳಾಗಿ ಕತ್ತರಿಸುತ್ತೀರಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಇನ್ನೆಷ್ಟು ಪಾಕಿಸ್ತಾನ ನಿರ್ಮಿಸುತ್ತೀರಿ.. ದೇಶವನ್ನು ಇನ್ನೆಷ್ಟು ಭಾಗ ಮಾಡುತ್ತೀರೀ?: ಫಾರೂಕ್ ಅಬ್ದುಲ್ಲಾ
ಕಾರ್ಯಕ್ರಮದಲ್ಲಿ ಫಾರೂಕ್ ಅಬ್ದುಲ್ಲಾ
Published On :
ಶ್ರೀನಗರ: ಈಗಾಗಲೇ ಒಂದು ಪಾಕಿಸ್ತಾನ ಇದೆ... ಇನ್ನೂ ಅದೆಷ್ಟು ಪಾಕಿಸ್ತಾನಗಳನ್ನು ನಿರ್ಮಿಸುತ್ತೀರಿ..ದೇಶವನ್ನು ಇನ್ನೆಷ್ಟು ಭಾಗಗಳಾಗಿ ಕತ್ತರಿಸುತ್ತೀರಿ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಶ್ರೀನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೌದು..ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು ಎಂದು ನಾನೇ ಹೇಳಿದ್ದೆ, ಅದು ವಾಸ್ತವ ಕೂಡ..ಪಾಕಿಸ್ತಾನದಿಂದ ಪಿಒಕೆಯನ್ನು ಭಾರತ  ಕಿತ್ತುಕೊಳ್ಳುಲ ಪ್ರಯತ್ನಿಸಿದರೆ ಅದು ನೋಡಿಕೊಂಡು ಸುಮ್ಮನಿರುವುದಿಲ್ಲ. ಖಂಡಿತಾ ಭಾರತದೊಂದಿಗೆ ಯುದ್ಧ ಮಾಡುತ್ತದೆ. ದೆಹಲಿಯಲ್ಲಿ ಕುಳಿತವರು ಬಾಯಿಗೆ ಏನು ಬೇಕಾದರೂ ಮಾತನಾಡಬಹುದು. ಆದರೆ ಅದರ  ಪರಿಣಾಮವನ್ನು ಗಡಿಯಲ್ಲಿರುವ ನಾವುಗಳು ಅನುಭವಿಸುತ್ತೇವೆ. ಪಾಕಿಸ್ತಾನದ ಬಳಿಯೂ ಅಣುಬಾಂಬ್ ಗಳಿದ್ದು, ನಿತ್ಯ ಬಾಂಬ್ ಸ್ಫೋಟಗಳ ನಡುವೆ ಸಮಸ್ಯೆ ಅನುಭವಿಸುತ್ತಿರುವ ನಮ್ಮ ಬಗ್ಗೆ ನಿಮಗೆ ಗೊತ್ತಿಲ್ಲ..ನಿತ್ಯ ನಾವು ಬಾಂಬ್  ಸ್ಫೋಟಗಳ ನಡುವೆ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರ ಕೋಮುವಾದಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ನಿಮ್ಮ ಕೋಮುವಾದದಿಂದಾಗಿ ಈಗಾಗಲೇ ದೇಶವನ್ನು ಇಬ್ಭಾಗ ಮಾಡಿ ಒಂದು ಪಾಕಿಸ್ತಾನವನ್ನು ನಿರ್ಮಾಣ  ಮಾಡಿದ್ದೀರಿ..ಯುದ್ಧ ಮತ್ತು ಹಿಂಸೆಗಳ ಮೂಲಕ ಇನ್ನೆಷ್ಟು ಪಾಕಿಸ್ತಾನಗಳನ್ನು ಸೃಷ್ಟಿಸಬೇಕೆಂದಿದ್ದೀರಾ? ನೀವು ನಮ್ಮ ಸಾವು ನೋಡಬೇಕು ಎಂದು ಕೊಂಡಿದ್ದೀರಾ? ಅರಮನೆಯಲ್ಲಿ ಕುಳಿತು ಮಾತನಾಡುವ ನಿಮಗೆ ಗಡಿಯಲ್ಲಿರುವ  ನಮ್ಮ ಸಮಸ್ಯೆಗಳು ಎಂದಿಗೂ ಅರ್ಥವಾಗದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಇತ್ತೀಚೆಗಷ್ಟೇ ಪಿಒಕೆ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಹೇಳಿಕೆ ನೀಡುವ ಮೂಲಕ ಫಾರೂಕ್ ಅಬ್ದುಲ್ಲಾ ವಿವಾದಕ್ಕೆ ಗುರಿಯಾಗಿದ್ದರು. ಈ ಸಂಬಂಧ ಫರೂಕ್ ಅಬ್ದುಲ್ಲಾ ವಿರುದ್ಧ ದೇಶದ್ರೋಹ ಪ್ರಕರಣ ಕೂಡ ದಾಖಲಾಗಿ ಪ್ರಕರಣ ವಿಚಾರಣೆ ಹಂತದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.