ದೇಶ

'ಆಶಿಕಿ' ಖ್ಯಾತಿಯ ರಾಹುಲ್ ರಾಯ್ ಬಿಜೆಪಿಗೆ ಸೇರ್ಪಡೆ

ಆಶಿಕಿ' ಖ್ಯಾತಿಯ ನಟ ರಾಹುಲ್ ರಾಯ್ ಇಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂದರು.

'ಆಶಿಕಿ' ಖ್ಯಾತಿಯ ರಾಹುಲ್ ರಾಯ್  ಬಿಜೆಪಿಗೆ ಸೇರ್ಪಡೆ
'ಆಶಿಕಿ' ಖ್ಯಾತಿಯ ರಾಹುಜ್ ರಾಯ್ ಬಿಜೆಪಿಗೆ ಸೇರ್ಪಡೆ
Published On :
ನವದೆಹಲಿ: 'ಆಶಿಕಿ' ಖ್ಯಾತಿಯ ನಟ ರಾಹುಲ್ ರಾಯ್ ಇಂದು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂದರು. ಬಿಜೆಪಿ ಸೇರ್ಪಡೆ ಬಳಿಕ ರಾಯ್ "ಇದು ನನ್ನ ಜೀವನದಲ್ಲಿ ಮಹತ್ವದ ದಿನ" ಎಂದರು.
"ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅವರ ಆಡಳಿತದಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಇದು ನನ್ನ ಜೀವನದ ಮಹತ್ವದ ದಿನ. ಮೋದಿ ತಮ್ಮ ಸಾರಥ್ಯದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ." ರಾಯ್ ನುಡಿದರು.
1990ರಲ್ಲಿ ತೆರೆಕಂಡ ಆಶಿಕಿ ಚಿತ್ರದಲ್ಲಿ ರಾಯ್ ಅಭಿನಯಿಸಿದ್ದ ಚಾಕೋಲೇಟ್ ಬಾಯ್ ಪಾತ್ರ ಯುವಜನತೆಯನ್ನು ಮೋಡಿ ಮಾಡಿತ್ತು. ಇದಲ್ಲದೆ ಅವರು 2007ರಲ್ಲಿ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ವಿಜೇತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.