ದೇಶ

ಐಆರ್ ಸಿಟಿಸಿ ಹೋಟೆಲ್ ಹಗರಣ: ತೇಜಶ್ವಿ, ರಾಬ್ರಿ ದೇವಿಗೆ ಇಡಿ ನೋಟಿಸ್

ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ನಡೆದ ಎರಡು ಐಆರ್ ಸಿಟಿಸಿ ಹೋಟೆಲ್ ಗಳ ಗುತ್ತಿಗೆಯಲ್ಲಿನ....

ಐಆರ್ ಸಿಟಿಸಿ ಹೋಟೆಲ್ ಹಗರಣ: ತೇಜಶ್ವಿ, ರಾಬ್ರಿ ದೇವಿಗೆ ಇಡಿ ನೋಟಿಸ್
ರಾಬ್ರಿ ದೇವಿ - ತೇಜಶ್ವಿ ಯಾದವ್
Published On :
ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದ ವೇಳೆ ನಡೆದ ಎರಡು ಐಆರ್ ಸಿಟಿಸಿ ಹೋಟೆಲ್ ಗಳ ಗುತ್ತಿಗೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ನವೆಂಬರ್ 20 ಮತ್ತು 24ರಂದು ವಿಚಾರಣೆಗೆ ಹಾಜರಾಗುವಂತೆ ಲಾಲು ಪತ್ನಿ ರಾಬ್ರಿ ದೇವಿ ಹಾಗೂ ಅವರ ಪುತ್ರ, ಬಿಹಾರ ಮಾಜಿ ಉಪ ಮುಖ್ಯಮಂತ್ರಿ ತೇಜಶ್ವಿ ಯಾದವ್ ಅವರಿಗೆ ಜಾರಿ ನಿರ್ದೇಶನಾಲಯ ಶುಕ್ರವಾರ ನೋಟಿಸ್ ಜಾರಿಗೆ ಮಾಡಿದೆ.
ಐಆರ್ ಸಿಟಿಸಿ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ನವೆಂಬರ್ 13ರಂದು ತೇಜಶ್ವಿ ಯಾದವ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ಈ ಮತ್ತೆ ನವೆಂಬರ್ 24ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಈ ಸಂಬಂಧ ಸಿಬಿಐ ಈಗಾಗಲೇ ಲಾಲು ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ, ಪುತ್ರ ಬಿಹಾರ ಮಾಜಿ ಡಿಸಿಎಂ ತೇಜಸ್ವಿ, ಎಂಡಿ. ಪಿ.ಕೆ. ಗೋಯಲ್, ಲಾಲೂ ಅವರ ಆಪ್ತ ಗೆಳೆಯ ಪ್ರೇಮ್ ಚಂದ್ರ ಗುಪ್ತಾ ಪತ್ನಿ ಸುಜಾತಾ ಮತ್ತಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ದೆಹಲಿ, ಪಾಟ್ನಾ, ರಾಂಚಿ, ಪುರಿ, ಗುರ್ ಗಾಂವ್ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
2006ರಲ್ಲಿ ಎರಡು ಐಆರ್ ಸಿಟಿಸಿ ಹೋಟೆಲ್ ಗಳ ನಿರ್ವಹಣೆಗೆ ಸುಜಾತಾ ಹೋಟೆಲ್ ಗಳಿಗೆ ನೀಡಿದ್ದ ಗುತ್ತಿಗಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪ ಲಾಲೂ ಪ್ರಸಾದ್ ಹಾಗೂ ಅವರ ಕುಟುಂಬದ ವಿರುದ್ದ ಕೇಳಿ ಬಂದಿತ್ತು. ಸುಜಾತಾ ಹೋಟೆಲೆ ಗಳನ್ನು ಐಆರ್ ಸಿಟಿಸಿ ಮತ್ತು ಸಾರ್ವಜನಿಕ ರೈಲ್ವೇ ಇಲಾಖೆ ಪ್ರಸಕ್ತ ವರ್ಷಾರಂಭದಲ್ಲಿ ತನ್ನ ಅಧೀನಕ್ಕೆ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.