ಎನ್ ಜಿಟಿ ವಿನಾಯಿತಿ ನೀಡಿದರಷ್ಟೇ ಸಮ-ಬೆಸ ಸಂಖ್ಯೆ ನೀತಿ ಪರಿಗಣನೆ: ದೆಹಲಿ ಸರ್ಕಾರ
ಎನ್ ಜಿಟಿಯ ಒಪ್ಪಿಗೆಯ ಹೊರತಾಗಿಯೂ ಎನ್ ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶವನ್ನು ವಾಪಸ್ ಪಡೆದಿದ್ದ ದೆಹಲಿ ಸರ್ಕಾರ, ಈಗ ಎನ್ ಜಿಟಿ ಕೆಲವು ವಿನಾಯಿತಿಗಳನ್ನು ನೀಡಿದರಷ್ಟೇ

Published On :
ನವದೆಹಲಿ: ಎನ್ ಜಿಟಿಯ ಒಪ್ಪಿಗೆಯ ಹೊರತಾಗಿಯೂ ಎನ್ ಸಿಆರ್ ವ್ಯಾಪ್ತಿಯಲ್ಲಿ ಸಮ-ಬೆಸ ಸಂಖ್ಯೆ ನೀತಿ ಜಾರಿ ಆದೇಶವನ್ನು ವಾಪಸ್ ಪಡೆದಿದ್ದ ದೆಹಲಿ ಸರ್ಕಾರ, ಈಗ ಎನ್ ಜಿಟಿ ಕೆಲವು ವಿನಾಯಿತಿಗಳನ್ನು ನೀಡಿದರಷ್ಟೇ ಸಮ-ಬೆಸ ಸಂಖ್ಯೆ ನೀತಿಯನ್ನು ಪರಿಗಣಿಸುವುದಾಗಿ ಹೇಳಿದೆ.
ಯಾವುದೇ ವಿನಾಯಿತಿ ಇಲ್ಲದೇ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೊಳಿಸಬೇಕೆಂದು ಎನ್ ಜಿಟಿ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮವನ್ನು ಜಾರಿಗೊಳಿಸದೇ ಇರಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್, ಎನ್ ಜಿಟಿ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೆ ತರಲು ಕೆಲವು ವಿನಾಯಿತಿಗಳನ್ನು ನೀಡಿದರೆ ಸಮ-ಬೆಸ ಸಂಖ್ಯೆಯನ್ನು ಜಾರಿಗೆ ತರಬಹುದೆಂದು ಹೇಳಿದ್ದಾರೆ.
ಎನ್ ಜಿಟಿಯ ಆದೇಶವನ್ನು ನಾವು ಗೌರವಿಸುತ್ತೇವೆ, ಮಹಿಳೆಯರ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಒಂದು ವೇಳೆ ಮಹಿಳೆಯರು ಹಾಗೂ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡದೇ ಇದ್ದಲ್ಲಿ ಸಮ-ಬೆಸ ಸಂಖ್ಯೆ ನಿಯಮವನ್ನು ಜಾರಿಗೊಳಿಸುವುದು ಸವಾಲಿನ ಸಂಗತಿ ಎಂದು ದೆಹಲಿ ಸಾರಿಗೆ ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Delhi governmentದೆಹಲಿ ಸರ್ಕಾರNational Green Tribunalರಾಷ್ಟ್ರೀಯ ಹಸಿರು ನ್ಯಾಯಮಂಡಳಿಸಮ-ಬೆಸ ಸಂಖ್ಯೆOdd-even scheme
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


