ದೇಶ

'ಇದೇನೂ ಪಿಕ್ ನಿಕ್ ಅಲ್ಲ': ದೆಹಲಿ ಸರ್ಕಾರದ ಸಮ-ಬೆಸ ನೀತಿಗೆ ಹಸಿರು ನ್ಯಾಯಾಧಿಕರಣ ತಡೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲೀನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜಾರಿಗೆ ಮುಂದಾಗಿರುವ ಸಮ-ಬೆಸ ನೀತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಸಮಾಧಾನ ವ್ಯಕ್ತಪಡಿಸಿದ್ದು, ಸಮ-ಬೆಸ ನೀತಿ ಜಾರಿಗೆ ತಡೆ ನೀಡಿದೆ.

'ಇದೇನೂ ಪಿಕ್ ನಿಕ್ ಅಲ್ಲ': ದೆಹಲಿ ಸರ್ಕಾರದ ಸಮ-ಬೆಸ ನೀತಿಗೆ ಹಸಿರು ನ್ಯಾಯಾಧಿಕರಣ ತಡೆ!
ಸಂಗ್ರಹ ಚಿತ್ರ
Published On :
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲೀನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜಾರಿಗೆ ಮುಂದಾಗಿರುವ ಸಮ-ಬೆಸ ನೀತಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಅಸಮಾಧಾನ ವ್ಯಕ್ತಪಡಿಸಿದ್ದು, ಸಮ-ಬೆಸ ನೀತಿ ಜಾರಿಗೆ ತಡೆ ನೀಡಿದೆ.
ದೆಹಲಿ ಸರ್ಕಾರದ ಸಮ-ಬೆಸ ಸಂಚಾರ ನೀತಿಗೆ ರಾಷ್ಟ್ರೀಯ ಹಸಿರು ಪೀಠ ಶುಕ್ರವಾರ ತೀವ್ರ ಆಕ್ಷೇಪ ವ್ಯಕಪಡಿಸಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಹಲವು ಪರಿಣಾಮಕಾರಿ ಕ್ರಮಗಳಿದ್ದರೂ, ಪ್ರತಿ ಬಾರಿ ಸಮ-ಬೆಸ ಕ್ರಮವನ್ನು ಮಾತ್ರ  ಆಯ್ದುಕೊಳ್ಳುತ್ತಿದ್ದೀರಿ. ಅದರ ಹೊರತಾಗಿ ಇತರೆ ಕ್ರಮಗಳ ಜಾರಿಗೆ ಸರ್ಕಾರ ಯಾಕೆ ಪ್ರಯತ್ನಿಸುತ್ತಿಲ್ಲ ಎಂದು ಎನ್​ ಜಿಟಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯದ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಇದೇ ನವೆಂಬರ್ 13ರಿಂದ 17ರವರೆಗೆ ಸಮ-ಬೆಸ ಸಂಖ್ಯೆ ನೀತಿ ಜಾರಿಮಾಡುತ್ತಿರುವುದಾಗಿ ಹೇಳಿತ್ತು. ಆದರೆ ಸಮ-ಬೆಸ ಜಾರಿ  ಮಾಡುವುದರಿಂದ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಎನ್ ಜಿಟಿ, ಅದರ ಬದಲಾಗಿ ಹೊಗೆ ನಿಯಂತ್ರಣಕ್ಕೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದೆ. ಮಾಲಿನ್ಯ ನಿಯಂತ್ರಣ  ಮತ್ತು ಪರಿಸರ ಇಲಾಖೆ ವರದಿ ನೀಡಿದ್ದರೂ, ಆಮ್ ಆದ್ಮಿ ಸರ್ಕಾರ ಅದನ್ನು ನಿರ್ಲಕ್ಷಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಮಾಲಿನ್ಯ ನಿಯಂತ್ರಕ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕೇ ಹೊರತು ಪಿಕ್ ನಿಕ್ ನಂತೆ ಅಲ್ಲ. ವಿಶ್ವದಲ್ಲೇ ದೆಹಲಿ ಅತ್ಯಂತ ಕೆಟ್ಟ ರಾಜಧಾನಿ ಎಂಬ ಕುಖ್ಯಾತಿಗೆ ತುತ್ತಾಗಿದೆ. ಪ್ರತೀ ಬಾರಿ ಮಾಲಿನ್ಯ ಸಮಸ್ಯೆ  ಉಂಟಾದಾಗ ದೆಹಲಿ ಸರ್ಕಾರ ಸಮ-ಬೆಸ ನೀತಿಯ ಬಾಲ ಹಿಡಿಯುತ್ತಿದೆಯೇ ಹೊರತು ಇದರ ಹೊರತಾಗಿಯೂ ಕೈಗೊಳ್ಳಬಹುದಾದ ಪರಿಣಾಮಕಾರಿ ಕ್ರಮಗಳ ಕುರಿತು ಚಿಂತನೆಯನ್ನೇ ಮಾಡುತ್ತಿಲ್ಲ ಎಂದು ಎನ್ ಜಿಟಿ ತನ್ನ  ಅಸಮಾಧಾನವನ್ನು ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.