ಬಿರಿಯಾನಿ ತಯಾರಿಸಿದ್ದ ಜೆಎನ್ ಯು ವಿವಿಯ 4 ವಿದ್ಯಾರ್ಥಿಗಳಿಗೆ ದಂಡ!
ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿದ್ದಕ್ಕಾಗಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗೆ 6,000 ರೂಪಾಯಿಗಳ ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೂ 3 ವಿದ್ಯಾರ್ಥಿಗಳಿಗೆ 6,000-10,000 ರೂಪಾಯಿಗಳ ದಂಡ ವಿಧಿಸಲಾಗಿದೆ.

Published On :
ನವದೆಹಲಿ: ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿದ್ದಕ್ಕಾಗಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗೆ 6,000 ರೂಪಾಯಿಗಳ ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೂ 3 ವಿದ್ಯಾರ್ಥಿಗಳಿಗೆ 6,000-10,000 ರೂಪಾಯಿಗಳ ದಂಡ ವಿಧಿಸಲಾಗಿದೆ.
ದಂಡ ಪಾವತಿ ಮಾಡಲು ವಿದ್ಯಾರ್ಥಿಗಳಿಗೆ 10 ದಿನಗಳ ಕಾಲಾವಕಾಶ ನೀಡಲಾಗಿದ್ದು, ದಂಡ ಪಾವತಿ ಮಾಡಲು ವಿಫಲವಾದರೆ ಕಠಿಣ ಶಿಕ್ಷೆಗೆ ಗುರಿಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರೊಕ್ಟೋರಿಯಲ್ ತನಿಖೆಯಲ್ಲಿ ಆಡಳಿತ ವಿಭಾಗದ ಕಚೇರಿ ಬಳಿ ಬಿರಿಯಾನಿ ತಯಾರಿಸಿ, ಮೂವರು ವಿದ್ಯಾರ್ಥಿಗಳೊಂದಿಗೆ ಸೇವನೆ ಮಾಡಿರುವ ಅಪರಾಧ ಸಾಬೀತಾಗಿದೆ ಎಂದು ಮುಖ್ಯ ಪ್ರೋಕ್ಟಾರ್ ಕುಶಾಲ್ ಕುಮಾರ್ ಹೇಳಿದ್ದಾರೆ.
ಆಡಳಿತ ವಿಭಾಗದ ಕಚೇರಿಯ ಮೆಟ್ಟಿಲ ಬಳಿ ಬಿರಿಯಾನಿ ತಯಾರಿಸಿರುವುದು ಜೆಎನ್ ಯು ಅಶಿಸ್ತಿನ ವರ್ತನೆಯಾಗಿದ್ದು ಬಿರಿಯಾನಿ ತಯಾರಿಸಿದ್ದ ವೇಳೆ ಇದ್ದ ವಿದ್ಯಾರ್ಥಿಗಳಾದ ಚೇಪಾಲ್ ಶೆರ್ಪಾ, ಅಮೀರ್ ಮಲಿಕ್ ಮತ್ತು ಮನೀಶ್ ಕುಮಾರ್ ಗೆ 6,000 ರೂಪಾಯಿ ದಂಡ ವಿಧಿಸಲಾಗಿದ್ದು, ಜೆಎನ್ ಯು ಪ್ರಧಾನ ಕಾರ್ಯದರ್ಶಿ ಶತರೂಪ ಚಕ್ರವರ್ತಿ ಗೆ 10,000 ರೂಪಾಯಿ ದಂಡ ವಿಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


